ಇಲ್ಲಿನ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಾಣಿಜ್ಯ ಸಂಘ ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಉದ್ಘಾಟನೆಯನ್ನು ಅಪರ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿ ನೋಟರಿಯಾಗಿ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ನಂದಿನಿ ಬಿ.ಶೆಟ್ಟಿಯವರು ಉದ್ಘಾಟಿಸಿದರು.
ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಒಂದೇ ಅಲ್ಲ, ಅವು ಬೇರೆ ಬೇರೆ, ಪ್ರಸ್ತುತ ವಿದ್ಯಮಾನದಲ್ಲಿ ಈ ಹಕ್ಕುಗಳನ್ನು ಸಮಗ್ರವಾಗಿ ಚಲಾಯಿಸುವುದು ನಮ್ಮ ಕರ್ತವ್ಯಗಳಲ್ಲಿ ಒಂದು ಎಂದು ತಿಳಿಸಿದರು. ಮಕ್ಕಳಿಗೆ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳ ವ್ಯತ್ಯಾಸವನ್ನು ಕೆಲವು ದೃಷ್ಟಾಂತಗಳೊಂದಿಗೆ ವಿವರಿಸಿದರು.
ಪ್ರಾಂಶುಪಾಲರಾದ ಪ್ರೊ. ಉಷಾ ನಾಯಕ್ ಅಧ್ಯಕ್ಷತೆ ವಹಿಸಿ ಉತ್ತಮ ಸಮಾಜಕ್ಕಾಗಿ ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಸಂರಕ್ಷಣಾ ವಿಧಾನದ ಅರಿವು ನಮಗೆ ಇರಬೇಕು. ಅವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು,
ವಾಣಿಜ್ಯ ಸಂಘ ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಸಂಚಾಲಕರಾದ ಉಪನ್ಯಾಸಕ ಸೂರಜ್ ಸ್ವಾಗತಿಸಿದರು. ಸೌಜನ್ಯ ನಿರೂಪಿಸಿದರು. ಸ್ನೇಹಾ ವಂದಿಸಿದರು. ವೇದಿಕೆಯಲ್ಲಿ ವಾಣಿಜ್ಯ ಸಂಘ ಪದಾಧಿಕಾರಿಗಳಾದ ತೃತೀಯ ಬಿ.ಕಾಂನ ಹೇಮಲತಾ ಮತ್ತು ತನ್ನಹಾ, ಮಾನವ ಹಕ್ಕುಗಳ ಸಂರಕ್ಷಣಾ ಪದಾಧಿಕಾರಿಗಳಾದ ತೃತೀಯ ಬಿ.ಎ ಸ್ನೇಹಾ ಮತ್ತು ಪದ್ಮಶ್ರೀ ಉಪಸ್ಥಿತರಿದ್ದರು.