ಕಾರ್ಕಳ:ಬಾವಿಗೆ ಹಾರಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 19ರಂದು ಕಾರ್ಕಳದಲ್ಲಿ ಸಂಭವಿಸಿದೆ. ಕಸಬಾ ಗ್ರಾಮದ ಮೀನಗುಂಡಿ ಕಂಪೌಂಡ್‌ನ ಕೆ. ವೆಂಕಟೇಶ ಹೆಗ್ಡೆ (22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತನು ಮಂಗಳೂರು ಸೈಂಟ್ ಜೋಸೆಫ್ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತಿದೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದನು. ಸುಮಾರು 10 ದಿನಗಳಿಂದ ಮೌನವಾಗಿದ್ದು, ಇದೇ ಕಾರಣದಿಂದ ಮನನೊಂದು ಜ. 19ರ ರಾತ್ರಿ 10.30 ಗಂಟೆಯಿಂದ 12.30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.