ಚಿಕ್ಕಮಗಳೂರು: ‘ಕರ್ನಾಟಕ’ ನಾಮಕರಣದ ಸುವರ್ಣ ವರ್ಷಾಚರಣೆಯ ನಿಮಿತ್ಯವಾಗಿ ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿಯವರು ಆಯೋಜಿಸಿರುವ ಸುವರ್ಣ ಮಹೋತ್ಸವ ಹಾಗೂ ಗೌರವ ಪುರಸ್ಕಾರ ಪ್ರದಾನ ಸಮಾರಂಭದ ಪ್ರಯುಕ್ತ ಕಾರ್ಕಳ ತಾಲ್ಲೂಕಿನ ಕು. ಸುಮಲತಾ ಬಜಗೋಳಿಯವರು ಕ್ರೀಡಾ ಕ್ಷೇತ್ರದಲ್ಲಿ ಗೈದ ಸಾಧನೆ ಮತ್ತು ಸಾಹಸವನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಮಟ್ಟದ ‘ಸುವರ್ಣ ಮಹೋತ್ಸವ ಪುರಸ್ಕಾರ’ಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ಕವಿತ್ತ ಕರ್ಮಮಣಿ ಅವರು ತಿಳಿಸಿದ್ದಾರೆ.