ಕಾಕಳ: ಶಾಲಾ ಶಿಕ್ಷಣ ಮತ್ತು ಸಾಕ್ಸರತಾ ಇಲಾಖೆ ಕ್ಷೇತ್ರ ಶಿಕ್ಷಣಾಣಾಧಿಕಾರಿಗಳ ಕಚೇರಿ ಕಾರ್ಕಳ ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಸ್ಥಳೀಯ ಕಾರ್ಕಳ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳವು ಕಾರ್ಕಳದ ಎಸ್.ವಿ.ಟಿ. ವಿದ್ಯಾಸಂಸ್ಥೆಯಲ್ಲಿ ಡಿಸೆಂಬರ್ 14 ಮತ್ತು 15ರಂದು ನಡೆಯಿತು.
ಉಡುಪಿ ಜಿಲ್ಲೆಯಿಂದ 850 ವಿದ್ಯಾರ್ಥಿಗಳು 75 ಮಂದಿ ಶಿಕ್ಷಕರು ಭಾಗವಹಿಸಿದ್ದರು. ಮೊದಲ ದಿನ ಬೆಳಿಗ್ಗೆ ನೋಂದಣಿ ಆರಂಭಗೊಂಡು ಬಳಿಕ ಬೆಳಗ್ಗಿನ ಉಪಾಹಾರ ಸ್ವೀಕರಿಸಿ ಧ್ವಜಾರೋಹಣಕ್ಕೆ ಸಮಾವೇಶಗೊಂಡರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಚಟುಟಿಕೆಗಳನ್ಪು ಹಮ್ಮಿಕೊಂಡು ಈ ಮಧ್ಯೆ ಲಘು ಪಾನೀಯ ವಿತರಿಸಲಾಯಿತು. ಬಳಿಕ ಚಟುವಟಿಕೆ ಮುಂದುವರಿದು ಮತ್ತೆ ವಿದ್ಯಾರ್ಥಿಗಳು ಊಟಕ್ಕೆ ತೆರಳಿದರು. ಮತ್ತೆ ಚಟುವಟಿಕೆ ಮುಂದುವರಿದು ಪುರಮೆರವಣಿಗೆಗೆ ಸಿದ್ಧರಾದರು. ಪುರಮೆರವಣಿಗೆ ಅತ್ಯಾಕರ್ಷಕವಾಗಿ ಮೂಡಿ ಬಂತು . ಮುಖ್ಯವಾಗಿ ಚೆಂಡೆಗಳು ಬ್ಯಾಂಡ್ ಗಳು ಬಣ್ಣದ ಕೊಡೆಗಳು ಗೊಂಬೆಗಳು ವಿಶೇಷ ಆಕರ್ಷಣೆಯಾಗಿ ಮೂಡಿ ಬಂದು ದಾರಿಯುದ್ದಕ್ಕೂ ಕಾರ್ಕಳ ಜನತೆ ನೋಡಿ ಸಂಭ್ರಮಿಸಿದರು.
ಬಳಿಕ ಬಂದು ಪುನಃ ಎಸ್.ವಿ.ಟಿ. ವಿದ್ಯಾ ಸಂಸ್ಥೆಗೆ ಬಂದು ಸಂಜೆಯ ಲಘು ಉಪಾಹಾರ ನೀಡಲಾಯಿತು. ಮತ್ತೆ ವಿದ್ಯಾರ್ಥಿಗಳಿಗಾಗಿ ಬೆಂಕಿಯಿಂದ ಸುರಕ್ಷಿತವಾಗಿರಲು ಅಗ್ನಿ ಶಾಮಕ ದಳದವರಿಂದ ಮಾಹಿತಿ ನೀಡಲಾಯಿತು ಮತ್ತೆ ಪ್ರಾತ್ಯಕ್ಷಿಕೆ ನೀಡಿ ಜಾಗೃತಿ ಮೂಡಿಸಿದರು.
ಬಳಿಕ ಸಂಜೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಂ.ಕೆ. ವಿಜಯ ಕುಮಾರ್ ವಹಿಸಿದ್ದರು. ಉದ್ಘಾಟಕರಾಗಿ ಭಾರತ್ ಸ್ಕೌಟ್, ಗೈಡ್ಸ್ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಆಗಮಿಸಿ ಮಾತಾನಾಡುತ್ತಾ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮತ್ತು ಆತ್ಮವಿಶ್ವಾಸ, ಸಹೋದರತೆ ಹಾಗೂ ಜೀವನದಲ್ಲಿ ಶಿಸ್ತು ಸಂಯಮ ಪರಿಶ್ರಮದ ಅರಿವನ್ನು ಮೂಡಿಸಲು ಸ್ಕೌಟ್ಸ್, ಗೈಡ್ಸ್ ಅತ್ಯಗತ್ಯ ಎಂದರು.
ವೇದಿಕೆಯಲ್ಲಿ ಮುಖ್ಯಅತಿಥಿ ಉಡುಪಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಬೆಂಗಳೂರು ವಲಯದ ಹಿರಿಯ ಸ್ಕೌಟರ್ ಚೆಲ್ಲಯ್ಯ ಉಡುಪಿ ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ ಉಡುಪಿ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಇನ್ನಾ ಎಸ್.ವಿ.ಟಿ. ವಿದ್ಯಾಸಂಸ್ಥೆಯ ಸಂಚಾಲಕ ಕೆ.ಪಿ.ಶೆಣೈ, ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ ರಾಜ್ಯ ಸಹ ಸಂಟನಾ ಆಯುಕ್ತೆ ಸುಮನಾ ಶೇಖರ್ ಕಾರ್ಕಳ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಸಾವಿತ್ರಿ ಮನೋಹರ್ ರಂಗ ಸಂಸ್ಕೃತಿ ಅಧ್ಯಕ್ಷ ಎಸ್ ನಿತ್ಯಾನಂದ ಪೈ ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಶಿಕ್ಷಣ ಸಂಯೋಜಕ ಆಂಗ್ಲ. ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಾಲಿನಿ ಪ್ರಕಾಶ್ ಶಿಬಿರ ನಾಯಕಿ ಆಕ್ಷತಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. ಸಹಾಯಕ ಜಿಲ್ಲಾ ಆಯುಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ ವಂದಿಸಿದರು. ಜಿಲ್ಲೆಯ 850 ಮಕ್ಕಳು 75 ಶಿಕ್ಷಕರು ಹೆತ್ತವರು ಊರ ವಿದ್ಯಾಭಿಮಾನಿಗಳು ಭಾಗವಹಿಸಿ ಅಭೂತಪೂರ್ವ ಜಿಲ್ಲಾ ಮೇಳವಾಗಿ ಮೂಡಿ ಬಂತು.
ಕಾರ್ಯಕ್ರಮದಲ್ಲಿ ಮುಖ್ಯ ಅಂತಾಷ್ಟ್ರೀಯ ಪ್ರಶಸ್ತಿ ಪಡೆದ ಜ್ಯೋತಿ ಜೆ.ಪೈ ಸ್ಕೌಟ್ಸ್ ಗೈಡ್ಸ್, ಚಳವಳಿ ತೊಡಗಿಸಿಕೊಂಡ ರಾಜ್ಯ ಸಂಸ್ಥೆಯ ಗೌರವ ಪಡೆದ ಸಾಧಕ ವ್ಯಕ್ತಿ ಸಾವಿತ್ರಿ ಮನೋಹರ್, ಯೋಗ ಕ್ಷೇತ್ರದ ಸಾಧಕ ನರೇಂದ್ರ ಕಾಮತ್ , ರಾಜ್ಯ ಮಟ್ಟದ ಗೀತಾ ಗಾಯನದ ಪ್ರಥಮ ಪ್ರಶಸ್ತಿ ವಿಜೇತ ಶಾಲೆ ಮಕ್ಕಳನ್ನು ಹಾಗೂ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು.
ಎರಡನೆಯ ದಿನದ ಬೆಳಗ್ಗೆ ಜಾಗೃತ ಧ್ವನಿಯೊಂದಿಗೆ ದಿನವನ್ನು ಸ್ವಾಗತಿಸಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ಬಿ.ಪಿ. ವ್ಯಾಯಮದಲ್ಲಿ ತೊಡಗಿಸಿಕೊಂಡರು .ಬಳಿಕ ಸರ್ವ ಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿದರು . ಮುಖ್ಯವಾಗಿ ಸಂಸ್ಕ್ರೃತಿ ಚಿಂತಕ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಯವರು ಉಪನ್ಯಾಸ ನೀಡಿದರು. ಬಳಿಕ ಧ್ವಜವಂದನೆ ಕಾರ್ಯಕ್ರಮ ನಡೆಯಿತು. ಬಳಿಕ ಉಪಾಹಾರ ಸ್ವೀಕರಿಸಿ ಪಥ ಸಂಚಲನ ಸಿದ್ಧತೆ ನಡೆದು ಪಥಸಂಚಲನ ಆಕರ್ಷಕವಾಗಿ ನಡೆದು ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗರವರು ಗೌರವ ರಕ್ಷೆಯನ್ನು ಸ್ವೀಕರಿಸಿದರು. ಬಳಿಕ ಮತ್ತೆ ದಿನದ ಚಟುವಟಿಕೆಗಳು ನಡೆಜವು ಬೆಂಕಿ ಬಳಸದೇ ತಿಂಡಿ ಹಾಗೂ ವಿವಿಧ ರಾಜ್ಯದ ಸಾಂಸ್ಕೃತಿಕ, ವೈವಿಧ್ಯಮಯತೆಯನ್ನು ತೋರುವ ಸಾಂಸ್ಕೃತಿಕ ವೇಷ ಎಲ್ಲರ ಗಮನ ಸೆಳೆಯಿತು.
ನಂತರ ಮಧ್ಯಾಹ್ನ ಊಟ. ಮಧ್ಯಾಹ್ನ ನಂತರ ಸಮಾರೋಪ ಸಮಾರಂಭ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಕೆ. ವಿಜಯ ಕುಮಾರ್ ಡಾ. ಭರತೇಶ, ಕಾರ್ಕಳ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಾರ್ಕಳ, ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಟೀಚರ್ಸ್ ಕೋಪರೇಟಿವ್ ಬ್ಯಾಂಕಿನ ನಿರ್ದೇಶಕ ಆನಂದ ಪೂಜಾರಿ, ರಂಗ ಸಂಸ್ಕೃತಿ ಅಧ್ಯಕ್ಷ ಎಸ್.ನಿತ್ಯಾನಂದ ಪೈ, ಸ್ಥಳೀಯ ಸಂಸ್ಥೆ ಉಡುಪಿ ಜಿಲ್ಲಾ ಸಂಸ್ಥೆಯ ಜತೆ ಕಾರ್ಯದರ್ಶಿ ಪುಷ್ಪಲತಾ ಹಾಗೂ ಜಿಲ್ಲಾ ಗೈಡ್, ತರಬೇತಿ ಆಯುಕ್ತೆ ಸುಮಂಗಲ ಸಹಾಯಕ ಜಿಲ್ಲಾ ಆಯುಕ್ತೆ ರಮಿತಾ ಶೈಲೆಂದ್ರ, ಸಂಸ್ಥೆ ಜಿಲ್ಲಾ ಸಹಾಯಕ ಆಯಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಸಾವಿತ್ರಿ ಮನೋಹರ್, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ಸತೀಶ್ ಬಿ.ಶೆಟ್ಟಿ, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್, ಶಿಬಿರ ನಾಯಕಿ ಗೈಡ್ ಕ್ಯಾಪ್ಟನ್ ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿ ವಂದಿಸಿದರು ಗೈಡ್ ಕ್ಯಾಪ್ಟನ್ ಶಶಿಕಲಾ ಹೆಗ್ಡೆ ಸ್ವಾಗತಿಸಿದರು. ಬಳಿಕ ಧ್ವಜಾ ಅವರೋಹಣದೊಂದಿಗೆ ಎರಡು ದಿನದ ಅಭೂತಪೂರ್ವ ಜಿಲ್ಲಾ ಮೇಳ ಯಶಸ್ವಿಯಾಗಿ ಮೂಡಿ ಬಂದು ಶಿಬಿರ ನಾಯಕಿ ಎಸ್.ವಿ.ಟಿ. ಗೈಡ್ ಕ್ಯಾಪ್ಟನ್ ಅಕ್ಷತಾ ಪ್ರಿಯಾ ಫ್ರಭು ಹಾಗೂ ಫ್ರಭಾ ಸಹಕರಿಸಿದರು. ಶಿಬಿರ ನಾಯಕಿ ಶಿಬಿರ ಮುಕ್ತಾಯ ಘೋಷಣೆ ಮಾಡಿ ಶಿಬಿರ ಮುಕ್ತಾಯಗೊಂಡಿತು. ಎರಡು ದಿನದ ಕಾರ್ಯಕ್ರಮಕ್ಕೆ ಎಸ್.ವಿ.ಟಿ. ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಶಿಕ್ಷಕ ಬಂಧುಗಳು. ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು.