ಅತ್ಯಾಚಾರಕ್ಕೊಳಗಾದ ಕುಕ್ಕುಂದೂರುವಿನ ಸಂತ್ರಸ್ತೆ ಯುವತಿಯ ಮನೆಗೆ ಇಂದು ಕಾರ್ಕಳ ಟೈಗರ್ಸ್ ಭೇಟಿ ನೀಡಿದೆ.
ಟೈಗರ್ಸ್ ಬಳಗ ಯುವತಿಯ ತಾಯಿ ಹಾಗೂ ಮನೆಯವರಿಗೆ ಧೈರ್ಯ, ಸ್ಥೈರ್ಯ ತುಂಬಿ ಆರ್ಥಿಕ ಸಹಕಾರ ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ರವರು ಯಾವುದೇ ಸಂದರ್ಭದಲ್ಲಿ ಕೂಡ ಟೈಗರ್ಸ್ ಬಳಗ ಯುವತಿ ಹಾಗೂ ಆಕೆಯ ಮನೆಯವರ ರಕ್ಷಣೆಗಾಗಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ .
ಯಾವುದೇ ವಿಚಾರದಲ್ಲಿ ಕೂಡ ಸಂಕಷ್ಟ ಬಂದರೂ ಟೈಗರ್ಸ್ ಬಳಗಕ್ಕೆ ತಿಳಿಸಿ ಎಂದು ಟೈಗರ್ಸ್ ಬಳಗ ಮನವಿ ಮಾಡಿದೆ.
ಯುವತಿಯ ತಾಯಿಗೆ ಈ ಸಂದರ್ಭದಲ್ಲಿ ಆರ್ಥಿಕ ಸಹಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಟೈಗರ್ಸ್ ತಂಡದ ಅಜಿತ್ ಕಾಮತ್, ಹರೀಶ್ ಅಮೀನ್, ಅನಂತ ಕೃಷ್ಣ ಶೆಣೈ, ಪ್ರದೀಪ್ ಶೃಂಗಾರ್, ವಸಂತ್ ಕುಮಾರ್, ಶ್ರೀನಾಥ್ ಆಚಾರ್ಯ, ಪ್ರವೀಣ್ ಕುಲಾಲ್, ಅರುಣ್ ದೇವಾಡಿಗ ಸದಸ್ಯರು ಉಪಸ್ಥಿತರಿದ್ದರು