ಕಾರ್ಕಳ : ಸಿಡಿಲು ಬಡಿದು ಯುವಕನೋರ್ವ ಸಾವನಪ್ಪಿದ ಘಟನೆ ಏ. 20ರಂದು ಕಾಂತಾವರದಲ್ಲಿ ಸಂಭವಿಸಿದೆ. ಪಾಲಡ್ಕ ನಿವಾಸಿ ಕೂಲಿ ಕಾರ್ಮಿಕ ನಿತಿನ್ ಪೂಜಾರಿ (24) ಮೃತ ಯುವಕ. ಶನಿವಾರ ಮುಂಜಾನೆ 5.30 ರಿಂದ 6.30 ಗಂಟೆಯ ಮಧ್ಯಾವಧಿಯಲ್ಲಿ ಕೇಪ್ಲಾಜೆ ಮಾರಿಗುಡಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.