ಮಾ.19 ರಿಂದ 21ರವರೆಗೆ ಕಾರ್ನಾಡು ಶ್ರೀ ಧರ್ಮಸ್ಥಾನದ “ವರ್ಷಾವಧಿ ನೇಮೋತ್ಸವವು ಜರಗಲಿರುವುದು.
ದಿನಾಂಕ: 09-03-2025ನೇ ರವಿವಾರ ಬೆಳಿಗ್ಗೆ ಗಂಟೆ 10:00ಕ್ಕೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮತ್ತು ಕಾರ್ನಾಡು ಶ್ರೀ ಹರಿಹರ ಕ್ಷೇತ್ರಕ್ಕೆ ಫಲಪುಷ್ಪ ಕಾಣಿಕೆ ಒಪ್ಪಿಸುವುದು ಸಂಜೆ ಗಂಟೆ 5:00ಕ್ಕೆ ಮೂಲಸ್ಥಾನದ ಹತ್ತಿರ ಇರುವ ವನದುರ್ಗಾ ಸನ್ನಿಧಾನದಲ್ಲಿ ಸಾರ್ವಜನಿಕ ದುರ್ಗಾನಮಸ್ಕಾರ ಪೂಜೆ. ತಾ. 13-03-2025ನೇ ಗುರುವಾರ ಮಧ್ಯಾಹ್ನ ಗಂಟೆ 3:30ರಿಂದ ಅರೆಮಜಲು ಕಂಬಳ, ಸಾಯಂಕಾಲ 7:30ರಿಂದ ಧರ್ಮದೈವಗಳಿಗೆ ತಂಬಿಲ ಸೇವೆ. ತಾ. 18-03-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 8:30ಕ್ಕೆ ಮಾಗಂದಡಿ ಭಂಡಾರದ ಮನೆಯಲ್ಲಿ ದೈವಗಳಿಗೆ ಶುದ್ಧ ಕಲಶಾಭಿಷೇಕ, ಬೆಳಿಗ್ಗೆ 11:00ಕ್ಕೆ ಧರ್ಮಸ್ಥಾನದಲ್ಲಿ ಧರ್ಮ ದೈವಗಳಿಗೆ ಕಲಶಾಭಿಷೇಕ ಮತ್ತು ನಾಗ ದೇವರಿಗೆ ನಾಗತಂಬಿಲ ತಾ. 19-3-2025ನೇ ಬುಧವಾರ ಬೆಳಿಗ್ಗೆ ಗಂಟೆ 7:30ಕ್ಕೆ ತೋರಣ ಮುಹೂರ್ತ. ಬೆಳಿಗ್ಗೆ ಗಂಟೆ 11:00ಕ್ಕೆ ಮಾಗಂದಡಿ ಭಂಡಾರ ಮನೆಯಿಂದ ಶ್ರೀ ಧರ್ಮದೈವಗಳ ಭಂಡಾರ ಹೊರಡುವುದು. ಮಧ್ಯಾಹ್ನ ಗಂಟೆ 12:15ಕ್ಕೆ ಧ್ವಜಾರೋಹಣ ಮಧ್ಯಾಹ್ನ ಗಂಟೆ 1:00ಕ್ಕೆ ಅನ್ನಸಂತರ್ಪಣೆ ಸಂಜೆ ಗಂಟೆ 5:30ರಿಂದ ಶ್ರೀ ಉಳ್ಳಾಯ ದೈವದ ನೇಮೋತ್ಸವ ರಾತ್ರಿ ಗಂಟೆ 9:30ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ ತಾ 20-3-2025 ಗುರುವಾರ ಮಧ್ಯಾಹ್ನ ಗಂಟೆ 1:00ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 9:00ರಿಂದ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ತಾ. 21-3-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 10:00ರಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ಮಧ್ಯಾಹ್ನ ಗಂಟೆ 1:00ರಿಂದ ಅನ್ನಸಂತರ್ಪಣೆ ಸಂಜೆ ಗಂಟೆ 5:30ಕ್ಕೆ ಧ್ವಜಾವರೋಹಣ ಮತ್ತು ಭಂಡಾರ ನಿರ್ಗಮನ ನಡೆಯಲಿದೆ.