ದಾವಣಗೆರೆ-ನವಂಬರ್,
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಡಿಸೆಂಬರ್ 1 ರಂದು ಭಾನುವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬೆಳಿಗ್ಗೆ 9-30 ರಿಂದ ಕರ್ನಾಟಕದ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ದಾವಣಗೆರೆಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ, ಗಡಿಯಾರ ಗೋಪುರದ ಹತ್ತಿರವಿರುವ ಈ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಕಲಾಕುಂಚದ ಮುತ್ತೆೈದೆಯರು ಆಹ್ವಾನಿಸಿ, ಕನ್ನಡ ಕಂಕಣ ಕಟ್ಟಿ, ಕನ್ನಡ ತಿಲಕವಿಟ್ಟು, ಕನ್ನಡಾರತಿ ಬೆಳಗಿ, ಪುಷ್ಪವೃಷ್ಠಿಯೊಂದಿಗೆ ಸ್ವಾಗತಿಸಿ, ವೇದಿಕೆಯಲ್ಲಿ ಪ್ರತ್ಯೇಕವಾದ ಸಿಂಹಾಸನದಲ್ಲಿ ಕೂರಿಸಿ ಕನ್ನಡ ಪೇಟದೊಂದಿಗೆ ಅವರದೇ ಭಾವಚಿತ್ರವಿರುವ ಸನ್ಮಾನಪತ್ರ, ಹಾರ,
ಶಾಲು ಹಾಕಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ವಹಿಸಿಕೊಳ್ಳಲಿದ್ದಾರೆ. ಕಲಬುರ್ಗಿಯ ಲೇಖಕ, ಯುವಕವಿ, ಮಲ್ಲಿಕಾರ್ಜುನ ಎಸ್. ಆಲಮೇಲರವರು ರಚಿಸಿದ ಹೊಂಗನಸು ಕವನ ಸಂಕಲನ ಮತ್ತು ಡಾ. ಶ್ರೀದೇವಿ
ಸೂರ್ಯಸುವರ್ಣ ಖಂಡಿ ರಚಿಸಿದ “ಕಾಣದ ಕಡಲಿಗೆ”ಕವನ ಸಂಕಲನಗಳನ್ನು ರಾಯಚೂರಿನ ಕವಯತ್ರಿ ಯುವ
ಸಾಹಿತಿಗಳಾದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ,ಯ ರಾಜ್ಯ ಸಮಿತಿ ಸಂಸ್ಥಾಪಕರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೀದರ್‌ನ ವಿಶ್ವ ಕನ್ನಡಿಗರ ಸಂಸ್ಥೆಯ
ರಾಜ್ಯಾಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಹಳ್ಳಿ, ಗದುಗಿನ ಅಶ್ವನಿ ಪ್ರಕಾಶನದ ಅಧ್ಯಕ್ಷರಾದ ಡಾ. ವ್ಹಿ.ವ್ಹಿ. ಹಿರೇಮಠ,
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಯುವ ಸಾಹಿತಿ, ಕವಯತ್ರಿ ಡಾ. ಶ್ರೀದೇವಿ ಸೂರ್ಯಕಾಂತ ಸುವರ್ಣಖಂಡಿ, ಶಿವಮೊಗ್ಗ ಜಿಲ್ಲೆಯ ಸಾಗರದ ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್. ಸಂಪ ಆಗಮಿಸಲಿದ್ದಾರೆ. ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ
ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ. ಸರ್ವ ಕನ್ನಡ ಮನಸ್ಸುಗಳು, ಸಾಹಿತಿಗಳು, ಕವಿ-ಕವಯತ್ರಿಯರು ಆಗಮಿಸಿ ಈ ಅಪರೂಪದ ವಿಜೃಂಭಣೆಯ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಕಲಾಕುಂಚ
ಕಛೇರಿ ಕಾರ್ಯದರ್ಶಿ ಎಂ.ಎಸ್.ಪ್ರಸಾದ್ ವಿನಂತಿಸಿದ್ದಾರೆ.