ಫ್ಲೋಟಿಂಗ್ ಟ್ರ್ಯಾಸ್ ಬೇರಿಯರ್ ಅನ್ನು ಶಿರೂರು ಗ್ರಾಮ ಪಂಚಾಯತ್ ನ ಮೊಗೇರ ಹೊಳೆ ಡ್ಯಾಂ ಸಮೀಪ 50 ಮೀಟರ್ ಅಂತರದಲ್ಲಿ ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಶಿರೂರು ಗ್ರಾಮ ಪಂಚಾಯತ್ ನಲ್ಲಿ ಅಳವಡಿಸಿಲಾಗಿದೆ
ಸಾಹಸ್ NGO ಸಂಸ್ಥೆಯ ಸ್ವಚ್ಛ ಕರಾವಳಿ ಮಿಷನ್ ಯೋಜನೆಯ ಸಹಭಾಗಿತ್ವದಲ್ಲಿ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿ.ಎಸ.ಆರ್ ಬೆಂಬಲದೊಂದಿಗೆ ಘನತ್ಯಾಜ್ಯ ನಿರ್ವಹಣೆಯ ಸುಧಾರಣೆ ಮತ್ತು ಸಾಗರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಸವು ಸಾಗರದ ಒಡಲನ್ನು ಸೇರುವುದನ್ನು ತಪ್ಪಿಸಲು ಕೈಗೊಂಡ ಬಹುದೊಡ್ಡ ಯೋಜನೆಯಾದ ಫ್ಲೋಟಿಂಗ್ ಟ್ರ್ಯಾಸ್ ಬೇರಿಯರ್ ಅನ್ನು ಶಿರೂರು ಗ್ರಾಮ ಪಂಚಾಯತ್ ನ ಮೊಗೇರ ಹೊಳೆ ಡ್ಯಾಂ ಸಮೀಪ 50 ಮೀಟರ್ ಅಂತರದಲ್ಲಿ ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಶಿರೂರು ಗ್ರಾಮ ಪಂಚಾಯತ್ ನಲ್ಲಿ ಅಳವಡಿಸಿ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಶೆಟ್ಟಿ ಶಿರೂರು ಗ್ರಾಮ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಕಾಪ್ಸಿ ನೂರ್ ಮಹಮ್ಮದ್, ಸಾಹಸ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಸುದೇಶ್ ಕಿಣಿ , ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
