ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದ ನೆನೆಪು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈ ಘಟನೆಯಲ್ಲಿ ಶ್ವಾನ ಒಂದು ತಮ್ಮ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿತ್ತು. ಇದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಆದರೆ ಇದೀಗ ಈ ಶ್ವಾನ ಪೊಲೀಸ್ ಇಲಾಖೆಗೆ ಸೇರಿದೆ.
ನಿನ್ನೆ (ಮಾ.09) ಉತ್ತರ ಕನ್ನಡ ಪೊಲೀಸರು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಐದು ಕಿ.ಮೀ ಓಡುವ ಮೂಲಕ ಅಚ್ಚರಿಗೊಳಿಸಿದ್ದು, ಬೆಳ್ಳಿ ಪದಕ ಪಡೆದುಕೊಂಡಿದೆ. ಶಾಸಕ ಸತೀಶ್ ಸೈಲ್ ಶ್ವಾನಕ್ಕೆ ಪದಕ ತೊಡಿಸಿದರು.
ಜುಲೈ 16 ರಂದು ನಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬ ಸೇರಿ ಹನ್ನೊಂದು ಜನರು ಮೃತಪಟ್ಟಿದ್ದರು. ಈ ವೇಳೆ ಮಾಲೀಕ ಲಕ್ಷ್ಮಣ್ ನಾಯ್ಕ ಮೃತಪಟ್ಟ ಘಟನೆಯ ಸ್ಥಳದಲ್ಲಿ ಶ್ವಾನ ರೋಧಿಸಿತ್ತು.