ಕನ್ನಡದಲ್ಲಿ ಹೊಸ ಶಬ್ದಗಳ ರಚಿಸಿ: ರಾಜಾರಾಮ ರಾವ್
ಮುಡಿಪು: ನಮ್ಮ ಕಾಲಕ್ಕೆ ಅಗತ್ಯವಾದ ಹೊಸ ಶಬ್ದಗಳನ್ನು ರಚಿಸುವುದು, ಇಂಗ್ಲಿಷ್ ಮತ್ತಿತರ ಭಾಷೆಗಳ ಪದಗಳಿಗೆ ಸಂವಾದಿಯಾದ ಆಕರ್ಷಕ ಪದಗಳನ್ನು ಬಳಸುವುದು ಇತ್ಯಾದಿಗಳ ಮೂಲಕ ಕನ್ನಡದ ಪದಸಂಪತ್ತು ಬೆಳೆಸಬೇಕಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ್ ರಾವ್ ಮೀಯಪದವು ಹೇಳಿದರು.
ಅವರು ಶುಕ್ರವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಮತ್ತು ವಿಶ್ವಮಂಗಳ ವಿದ್ಯಾಸಂಸ್ಥೆ ಕೊಣಾಜೆ ಸಹಯೋಗದೊಂದಿಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ವಿಶ್ವಮಂಗಳ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಳ್ಳಾಲ ಘಟಕ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಸೋಮೇಶ್ವರ ಗ್ರಾಮ ಸಂಚಾಲಕರಾದ ತೋನ್ಸೆ ಪುಷ್ಕಳ ಕುಮಾರ್, ವಿಶ್ವಮಂಗಳದ ಮುಖ್ಯ ಶಿಕ್ಷಕರುಗಳಾದ ಪೂರ್ಣಿಮಾ ಡಿ ಶೆಟ್ಟಿ, ಪ್ರಿಯಾ, ಶೋಭಾವತಿ, ಹಂಸಗೀತ, ಕಸಾಪ ಪದಾಧಿಕಾರಿಗಳಾದ ಶಿಕ್ಷಕ ರಾಧಾಕೃಷ್ಣ ರಾವ್ , ಸುರೇಂದ್ರ ರೈ ಗ್ರಾಮಚಾವಡಿ ಮತ್ತಿತರರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಪ್ರಿಯಾ ಸ್ವಾಗತಿಸಿದರು. ದಿಲೀಪ್ ರೈ ನಿರೂಪಿಸಿದರು. ತೋನ್ಸೆ ಪುಷ್ಕಳ ಕುಮಾರ್ ಇವರಿಂದ ಕನ್ನಡ ಹಾಡುಗಳ ಪ್ರಸ್ತುತಿ ಹಾಗೂ ವಿಶ್ವಮಂಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.