ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25ನೇ ಬೆಳ್ಳಿ ಹಬ್ಬ ವರ್ಷಾಚರಣೆ ಬನ್ನಿ ಚುಟುಕು ಮೇಳಕ್ಕೆ 2025 ಮಾರ್ಚ್ 27ರಂದು ಕಾಸರಗೋಡು ಕನ್ನಡ ಗ್ರಾಮಕ್ಕೆ ಚುಸಾಪ ಸುದ್ದಿ
1) ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ,ಮೈಸೂರು ಸಹಯೋಗದಲ್ಲಿ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದಂದು ಸುಮಾರು 500 ಮಂದಿಗೆ ಬೆಳಿಗ್ಗೆ ಉಪಹಾರ, ಸಂಜೆ ಚಾ ಕಾಫಿ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಉಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುವುದು . ಕಾಸರಗೋಡು ಕನ್ನಡ ಗ್ರಾಮದಲ್ಲಿ ಪಾಕಶಾಲೆ, ಅನ್ನ ದಾಸೋಹಕ್ಕೆ ವ್ಯವಸ್ಥೆ ಹಾಗೂ ಶೌಚಾಲಯ, ಸ್ಥಾನಗ್ರಹ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿರುತ್ತದೆ.
2) ಸಾಹಿತ್ಯ ,ಶಿಕ್ಷಣ,ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಬಂಧುಗಳೆಲ್ಲರೂ ದಿನಾಂಕ 27 ಮಾರ್ಚ್ 2025 ಗುರುವಾರದಂದು ಕಾಸರಗೋಡು ಕನ್ನಡಿಗರ ಮೇಲೆ ಪ್ರೀತಿ ಅಭಿಮಾನವಿಟ್ಟು, ತಮ್ಮ ಉದ್ಯೋಗ ವ್ಯವಹಾರದಲ್ಲಿರುವವರೆಲ್ಲರೂ ಒಂದು ದಿನ ರಜಾ ಹಾಕಿ ನಮ್ಮ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಬರಬೇಕಾಗಿ ಭಿನ್ನವಿಸಿಕೊಳ್ಳುತ್ತಿದ್ದೇವೆ.
3) ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ,ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಠಿ , ರಾಜ್ಯಮಟ್ಟದ ಚುಟುಕು ಕಥಾ ಗೋಷ್ಠಿಯಲ್ಲಿ ಭಾಗವಹಿಸುವ ನೂರಾರು ಚುಟುಕು ಕವಿಗಳಿಂದ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ವಾಚಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಚುಟುಕು ಕವಿಗೋಷ್ಠಿಗೆ ಆಯ್ಕೆಯಾದ ಚುಟುಕು ಕವಿಗಳಿಗೆ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25ನೇ ಬೆಳ್ಳಿ ಹಬ್ಬ ವರ್ಷದ ರಾಜ್ಯ ಮಟ್ಟದ ಕವಿ -ಕಾವ್ಯ ಪ್ರಶಸ್ತಿ ಪ್ರಮಾಣ ಪತ್ರ , ಶಾಲು, ಸ್ಮರಣಿಕೆ ಸಾಹಿತ್ಯ ಕೃತಿಗಳ ಕಿಟ್ ಗಳನ್ನು ನೀಡಿ ಗೌರವಿಸಲಾಗುವುದು. ಈ ಬೃಹತ್ ಕಾರ್ಯ ಯೋಜನೆಯ ಪ್ರಾಯೋಜಕರಾಗಿ ಧನ ಸಹಾಯ ನೀಡುವವರಿಗೆ ಅವಕಾಶವಿದೆ.
4) ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಸ್ವರಚಿತ ಚುಟುಕುಗಳನ್ನು ರಚಿಸಿ ವಾಚಿಸಿದ ಚುಟುಕು ಕವಿಗಳಿಗೆ ನಗದು ಪುರಸ್ಕಾರ ನೀಡಲು ಯೋಜನೆಯಿದೆ . (ಪ್ರಥಮ, ದ್ವಿತೀಯ,ತೃತೀಯ ಸ್ಥಾನ ) ತೀರ್ಪುಗಾರರ ಆಯ್ಕೆ ಸಮಿತಿಯು ಚುಟುಕು ಕವಿಗಳನ್ನು ಗುರುತಿಸುವ ಕಾರ್ಯ ಮಾಡಲಿದೆ. 5)ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಮಾಧ್ಯಮ ಮಿತ್ರರು ಸುದ್ದಿವಾಹಿನಿ,ಸಾಮಾಜಿಕ ಜಾಲತಾಣ,ದೃಶ್ಯ, ಪತ್ರಿಕಾ ಮಾಧ್ಯಮಗಳಿಗೆ ಕೃತಜ್ಞತೆಗಳು. ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕವಿ ಸಾಹಿತಿ,ಸಾಂಸ್ಕೃತಿಕ ಸಾಹಿತ್ಯ ಸಂಘಟಕ ಅಧ್ಯಾಪಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರನ್ನು ಅಭಿನಂದಿಸಿದ ಸರ್ವರಿಗೂ ಪತ್ರಿಕಾ ಮಾಧ್ಯಮ, ಸುದ್ದಿವಾಹಿನಿ,ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮ ಮಿತ್ರರಿಗೆಲ್ಲರಿಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಹಾಗೂ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಸ್ಥಾಪಕ – ರಾಜ್ಯ ಪ್ರಧಾನ ಸಂಚಾಲಕ ಡಾಕ್ಟರ್ ಎಂ.ಜಿ.ಆರ್ ಅರಸ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ
6) ಕೇರಳ ರಾಜ್ಯ ಸಹಿತ ಕಾಸರಗೋಡು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ , ಚಿಕ್ಕಮಗಳೂರು, ಕೊಡಗು,ಮೈಸೂರು, ಹಾಸನ, ಮಂಡ್ಯ ,ಹುಬ್ಬಳ್ಳಿ , ಧಾರವಾಡ, ಬೆಳಗಾವಿ,ಬೆಂಗಳೂರು ಜಿಲ್ಲೆ ಹಾಗೂ ಕರ್ನಾಟಕ, ಮಹಾರಾಷ್ಟ್ರ,ಗೋವಾ ರಾಜ್ಯದ ವಿವಿಧ ಜಿಲ್ಲೆಗಳ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ಕವಿಗಳಾಗಿಯೂ, ವಿಶೇಷ ಆಹ್ವಾನಿತರಾಗಿಯೂ ಭಾಗವಹಿಸಲಿದ್ದಾರೆ.
7) ಇತಿಹಾಸ ಪ್ರಸಿದ್ಧವಾದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ಇದೇ 2025 ಮಾರ್ಚ್ 27ರಿಂದ ಏಪ್ರಿಲ್ 7 ರ ತನಕ ನಡೆಯಲಿದೆ. ಈ ಪುಣ್ಯ ದಿನದಂದು ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದವರಿಗೆಲ್ಲಾ ಸಮಾರೋಪ ಸಮಾರಂಭದ (ಸಂಜೆ ಗಂಟೆ 4.00) ನಂತರ ಮಧೂರು ದೇವಸ್ಥಾನಕ್ಕೆ ಸಂದರ್ಶಿಸಲು ಅವಕಾಶವಿರುತ್ತದೆ. ಕಾಸರಗೋಡು ಕನ್ನಡ ಗ್ರಾಮದಿಂದ ಮಧೂರಿಗೆ 4 ಕಿಲೋಮೀಟರ್ ದೂರವಿರುತ್ತದೆ.
8) ಕಾಸರಗೋಡು ಕನ್ನಡ ಗ್ರಾಮದಲ್ಲಿ ವಿ. ಕೆ. ಎಂ. ಕಲಾವಿದರು (ರಿ )ಬೆಂಗಳೂರು ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು ಸಹಯೋಗದಲ್ಲಿ ಸಂಜೆ ಗಂಟೆ 4.30 ರ ನಂತರ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಕರ್ನಾಟಕ ಗಡಿನಾಡ ಉತ್ಸವ ಮತ್ತು ಬೆಂಗಳೂರು ಕನ್ನಡ ನಾಟಕೋತ್ಸವದಲ್ಲಿ 4 ಐತಿಹಾಸಿಕ, ಚಾರಿತ್ರಿಕ, ಸಾಮಾಜಿಕ ಕನ್ನಡ ನಾಟಕಗಳ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳ 30 ಮಂದಿ ಪ್ರಸಿದ್ಧ, ಯುವ,ಹಿರಿಯ ಮಹಿಳಾ ಕಲಾವಿದರಿಂದ ಸುಗಮ ಸಂಗೀತ ಗಾಯನ,ನಾಟಕ, ಭರತನಾಟ್ಯ,ನೃತ್ಯ ರೂಪಕ, ಜಾನಪದ ನೃತ್ಯ, ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯದಿಂದ ನೂರಾರು ಕಲಾವಿದರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
9) ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರಂತರವಾಗಿ ನಡೆಯುವ ಸಮ್ಮೇಳನ ಸಮಾವೇಶಗಳ ಮಾಹಿತಿಯನ್ನು ತಿಳಿಸಲು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕುಗಳಲ್ಲಿ ಪ್ರಕಟವಾಗುತ್ತಿರುವ ಕನ್ನಡ ದಿನಪತ್ರಿಕೆ, ಕನ್ನಡ ವಾರಪತ್ರಿಕೆ, ಕನ್ನಡ ಪಾಕ್ಷಿಕ ಪತ್ರಿಕೆ ,ಕನ್ನಡ ಮಾಸ ಪತ್ರಿಕೆಗಳ ಹೆಸರು,ವಿಳಾಸ, ಮೊಬೈಲ್,ಇ-ಮೇಲ್ ಸಂಖ್ಯೆಯನ್ನು ಸಂಗ್ರಹಿಸಿ ನಮ್ಮ ವಾಟ್ಸ್ ಪ್ ಗೆ ಟೈಪ್ ಮಾಡಿ ಕಳುಹಿಸಲು ವಿನಂತಿಸಲಾಗಿದೆ.
ವಿ.ಸೂ:- ಈ ಮಾಧ್ಯಮ ಪ್ರಕಟಣೆಯನ್ನು ತಮ್ಮ ವಾಟ್ಸ್ ಪ್ ಬಳಗದ ಇತರ ಸದಸ್ಯರಿಗೂ ಫಾರ್ವಡ್ ಮಾಡಿ ಸಮ್ಮೇಳನದ ಮಾಹಿತಿಯನ್ನು ಮೊಬೈಲ್ ವಾಟ್ಸ್ ಪ್ ಮೂಲಕವೂ ತಿಳಿಸಿ ಪ್ರೋತ್ಸಾಹಿಸಲು ವಿನಂತಿ.
ಮನವಿ:- ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವ ಬಂಧುಗಳೆಲ್ಲರೂ
SHIVARAMA KASARAGOD GOOGLE PAY NUMBER- 9448572016 ( ಗೂಗಲ್ ಪೇ ಯಲ್ಲಿ ದೇಣಿಗೆಯನ್ನು ಪಾವತಿಸಬಹುದು.) ಹಣ ಪಾವತಿಸಿದವರು ದಯವಿಟ್ಟು ವಾಟ್ಸ್ ಪ್ ಮೂಲಕ ಮಾಹಿತಿಯನ್ನು ತಿಳಿಸಿ.