ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಹಾಗೂ ವಿ.ಕೆ.ಎಂ. ಕಲಾವಿದರು(ರಿ ),ಬೆಂಗಳೂರುಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಪ್ರಾಯೋಜಕತ್ವದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ಬೆಳಿಗ್ಗೆ ಗಂಟೆ 9:00 ರಿಂದ ರಾತ್ರಿ 9.00 ರವರೆಗೆ ನಡೆಯುವ ಒಂದು ದಿನದ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ- 2025 ಮತ್ತು ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ, ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸುವ ಉದ್ದೇಶದಿಂದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ದಿನಾಂಕ 26 ಜನವರಿ 2025 ಆದಿತ್ಯವಾರದಂದು ಅಪರಾಹ್ನ ಗಂಟೆ 3.00ಕ್ಕೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರೆಯಲಾಗಿದೆ.
ಈ ಸ್ವಾಗತ ಸಮಿತಿ ಸಭೆಯಲ್ಲಿ ತಾವು ತಪ್ಪದೇ ಭಾಗವಹಿಸಿ ತಮ್ಮ ಸಲಹೆ, ಸೂಚನೆ ಮಾರ್ಗದರ್ಶನಗಳನ್ನು ನೀಡಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.
ವಿಷಯ:-
1) ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ – ಸ್ವಾಗತ ಸಮಿತಿ ರಚನೆ
2) ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಮತ್ತು ಘೋಷಣೆ.
3) ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಕಾಸರಗೋಡು, ಮಂಜೇಶ್ವರ, ಹೊಸದುರ್ಗ ತಾಲೂಕು ಘಟಕದ ಅಧ್ಯಕ್ಷರ ನೇಮಕ.
4) ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು ಇದರ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂಭ್ರಮದ ನೆನಪಿಗಾಗಿ ಪ್ರಥಮ ಕೇರಳ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನದ ದಿನಾಂಕದ ಘೋಷಣೆ.
5) ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಗೋಷ್ಠಿ ಮತ್ತು ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಗೋಷ್ಠಿಯಲ್ಲಿ ಒಟ್ಟು 100 ಮಂದಿ ಚುಟುಕು ಕವಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುವುದು. ರಾಜ್ಯ ಮಟ್ಟದ ಚುಟುಕು ಕಥಾ ಗೋಷ್ಠಿಯಲ್ಲಿ 25 ಮಂದಿಗೆ ಅವಕಾಶವಿದೆ.
6) ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ರಂದು ವಿ.ಕೆ.ಎಂ ಕಲಾವಿದರು (ರಿ ),ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ಗಡಿನಾಡ ಉತ್ಸವ,ವಿಶ್ವ ರಂಗಭೂಮಿ ದಿನಾಚರಣೆ, ಬೆಂಗಳೂರು ಕನ್ನಡ ನಾಟಕೋತ್ಸವ, ಮತ್ತು ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದಲ್ಲಿ ಮೂರು ಐತಿಹಾಸಿಕ, ಚಾರಿತ್ರಿಕ, ಸಾಮಾಜಿಕ, ಕನ್ನಡ ನಾಟಕಗಳನ್ನು ಪ್ರದರ್ಶಿಸಲಾಗುವುದು. ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳ ಸುಮಾರು 30 ಮಂದಿ ಪ್ರಸಿದ್ಧ, ಯುವ ಮಹಿಳಾ ಕಲಾವಿದರಿಂದ ನಾಟಕ, ಭರತನಾಟ್ಯ, ನೃತ್ಯ ರೂಪಕ,ಜಾನಪದ ನೃತ್ಯ, ಸುಗಮ ಸಂಗೀತ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 100 ಕಲಾವಿದರು ಭಾಗವಹಿಸಲಿದ್ದಾರೆ
7) ವಿವಿಧ ಕ್ಷೇತ್ರದ 5 ಮಂದಿ ಸಾಧಕರನ್ನು ಗುರುತಿಸಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
8) ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಕ್ಷೇತ್ರದ 5 ಮಂದಿ ಸಾಧಕರನ್ನು ಗುರುತಿಸಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
9) ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು ಇದರ ಸ್ಥಾಪಕ ರಾಜ್ಯ ಪ್ರದಾನ ಸಂಚಾಲಕ ಡಾ. ಎಂ.ಜಿ.ಆರ್ ಅರಸ್ ಅವರಿಗೆ ಜೀವಮಾನದ ಸಾಧನೆಗೆ ಪ್ರಶಸ್ತಿ ಪ್ರದಾನ.
10) ವಿ. ಕೆ. ಎಂ ಕಲಾವಿದರು(ರಿ ),ಬೆಂಗಳೂರು ಇದರ ಸ್ಥಾಪಕ ಪ್ರದಾನ ಕಾರ್ಯದರ್ಶಿ ಸಿ.ಎಂ ತಿಮ್ಮಯ್ಯ ಅವರಿಗೆ ಜೀವಮಾನದ ಸಾಧನೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಿವರಾಮ ಕಾಸರಗೋಡು ಅಧ್ಯಕ್ಷರು,ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ), ಕಾಸರಗೋಡು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ
ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ ಕಾಸರಗೋಡು -671121
ಮೊಬೈಲ್:-9448572016,9901951965
ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ – 2025 ಸ್ವಾಗತ ಸಮಿತಿ ರಚನಾ ಸಭೆ
RELATED ARTICLES