ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಹಾಗೂ ವಿ.ಕೆ.ಎಂ .ಕಲಾವಿದರು (ರಿ ),ಬೆಂಗಳೂರು ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ಸಹಯೋಗದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಮಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು, ಮತ್ತು ವಿವಿಧ ಸಂಘ,ಸಂಸ್ಥೆಗಳ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಬೆಳಿಗ್ಗೆ ಗಂಟೆ 9:00 ರಿಂದ ರಾತ್ರಿ 9.00 ರವರೆಗೆ,ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25 ನೇ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂಭ್ರಮ, ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ- 2025 ಮತ್ತು ಕರ್ನಾಟಕ ಗಡಿನಾಡ ಉತ್ಸವ, ವಿ. ಕೆ. ಎಂ ಕಲಾವಿದರು (ರಿ ),ಬೆಂಗಳೂರು ಇದರ ನೇತೃತ್ವದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಕಾಸರಗೋಡು – ಬೆಂಗಳೂರು ಕನ್ನಡ ನಾಟಕೋತ್ಸವ- ಐತಿಹಾಸಿಕ ಚಾರಿತ್ರಿಕ ಸಾಮಾಜಿಕ ಕನ್ನಡ ನಾಟಕಗಳ ಪ್ರದರ್ಶನಗೊಳ್ಳಲಿದೆ. ಸುಮಾರು 30 ಮಂದಿ ಬೆಂಗಳೂರಿನ ಪ್ರಸಿದ್ಧ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಗಳ ಸಂಗೀತ, ನೃತ್ಯ ,ಕಲಾವಿದರು, ರಂಗಭೂಮಿ ಕಲಾವಿದರು, ಮಹಿಳಾ ನಾಟಕ ಕಲಾವಿದರು, ನಾಟಕ ನಿರ್ದೇಶಕರು,ಸಂಗೀತ ನಿರ್ದೇಶಕರು,ಪ್ರಸಿದ್ಧ ಗಾಯಕರು ಭಾಗವಹಿಸಲಿದ್ದಾರೆ. ಬೆಂಗಳೂರಿನ ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಂದ ಭರತನಾಟ್ಯ, ನೃತ್ಯ ರೂಪಕ, ಜಾನಪದ ನೃತ್ಯ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಹಾಗೂ ಕರ್ನಾಟಕ ನಾಟಕ ಅಕಾಡೆಮಿ,ಬೆಂಗಳೂರು ಸಹಕಾರ ನೀಡಲಿದೆ. ಕರಾವಳಿ
ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮ ಮತ್ತು 2025 ನವಂಬರ್ 4 ರಂದು ಶಿವರಾಮ ಕಾಸರಗೋಡು ಅವರ 60ನೇ ಜನ್ಮದಿನೋತ್ಸವ – ಜನ್ಮ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ನೇತೃತ್ವದಲ್ಲಿ 2025 ನವಂಬರ್ 3 ಮತ್ತು 4ರಂದು ಕೇರಳ ರಾಜ್ಯ 3 ನೇ ದಾಸ ಸಾಹಿತ್ಯ ಸಮ್ಮೇಳನ ಮತ್ತು ಕೇರಳ ರಾಜ್ಯ ಭಜನಾ ಸಂಘಟನೆಗಳ ಸಮಾವೇಶವನ್ನು ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ನೇತೃತ್ವದಲ್ಲಿ 2025 ದಶಂಬರ್ 25 ಮತ್ತು 26 ರಂದು ದ್ವಿತೀಯ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂಭ್ರಮದ ನೆನಪಿಗಾಗಿ ಶೀಘ್ರದಲ್ಲಿ ಪ್ರಥಮ ಕೇರಳ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಲಾಗುವುದು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ 2025 ದಶಂಬರ್ 27 ಮತ್ತು 28ರಂದು ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2025 ಮತ್ತು ಕೇರಳ – ಕರ್ನಾಟಕ ಉತ್ಸವವನ್ನು ಸಂಘಟಿಸಲು ತೀರ್ಮಾನಿಸಲಾಗಿದೆ.
ವಿಶೇಷ ಸೂಚನೆ:- ಇತಿಹಾಸ ಪ್ರಸಿದ್ಧವಾದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು 2025 ಮಾರ್ಚ್ 27 ರಿಂದ ಏಪ್ರಿಲ್ 7 ರ ತನಕ ನಡೆಯಲಿದೆ. ಪ್ರಾರಂಭದ ಪುಣ್ಯದಿನದಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ – 2025 ಹಾಗೂ ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ, ಕಾಸರಗೋಡು ಬೆಂಗಳೂರು ಕನ್ನಡ ನಾಟಕೋತ್ಸವ ಮತ್ತು ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು, ಕಲಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,
ಕಾಸರಗೋಡು -671121
ಮೊಬೈಲ್ :-9448572016,
9901951965
ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕರ್ನಾಟಕ ಗಡಿನಾಡ ಉತ್ಸವ – ವಿಶ್ವ ರಂಗಭೂಮಿ ದಿನಾಚರಣೆ – ಬೆಂಗಳೂರು ಕನ್ನಡ ನಾಟಕೋತ್ಸವ
RELATED ARTICLES