Tuesday, January 14, 2025
HomeUncategorizedಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ -2025

ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ -2025


ರಾಜ್ಯ ಮಟ್ಟದ ಅಂಚೆ ಕಾರ್ಡ್ ಕಥಾ ಸ್ಪರ್ಧೆ ಮತ್ತು ಅಂಚೆ ಕಾರ್ಡ್ ಚುಟುಕು ಸ್ಪರ್ಧೆಗೆ ಅಹ್ವಾನ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ವರ್ಷಾಚರಣೆಯ ಪ್ರಯುಕ್ತ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು ಇದರ ಮಾರ್ಗದರ್ಶನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರದಂದು ಒಂದು ದಿನದ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ .
ಸಮ್ಮೇಳನದಲ್ಲಿ ಅಂತರರಾಜ್ಯ ಮಟ್ಟದ ಅಂಚೆ ಕಾರ್ಡ್ ಕಥಾ ಸ್ಪರ್ಧೆ ಮತ್ತು ಅಂಚೆ ಕಾರ್ಡ್ ಚುಟುಕು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಅಂಚೆ ಕಾರ್ಡ್ ನಲ್ಲಿ ಸ್ವರಚಿತ ಕಥೆ ಮತ್ತು ಅಂಚೆ ಕಾರ್ಡ್ ನಲ್ಲಿ ಸ್ವರಚಿತ ಚುಟುಕುಗಳನ್ನು ಬರೆದು,ತಮ್ಮ ಹೆಸರು, ವಿಳಾಸ ,ಮೊಬೈಲ್ ಸಂಖ್ಯೆಯೊಂದಿಗೆ 2025 ಫೆಬ್ರವರಿ 28ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಬೇಕು. ಅಂಚೆ ಕಾರ್ಡ್ ಕಥಾ ಸ್ಪರ್ಧೆ ಮತ್ತು ಅಂಚೆ ಕಾರ್ಡ್ ಚುಟುಕು ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದವರ ಹೆಸರನ್ನು ಪತ್ರಿಕಾ ಮಾಧ್ಯಮದಲ್ಲಿ ಪ್ರಕಟಿಸಲಾಗುವುದು. ಆಯ್ಕೆ ಸಮಿತಿಯಿಂದ ಆಯ್ಕೆಯಾದ ಅತ್ಯುತ್ತಮವಾದ 50 ಮಂದಿ ಅಂಚೆ ಕಾರ್ಡ್ ಕಥಾ ಸ್ಪರ್ಧೆ ಮತ್ತು ಅಂಚೆ ಕಾರ್ಡ್ ಚುಟುಕು ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಂತರ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಸ್ವರಚಿತ ಚುಟುಕು ವಾಚನಗೈಯಲು ಅವಕಾಶ ನೀಡಲಾಗುವುದು.
ಸಂಪರ್ಕ ವಿಳಾಸ :- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಗ್ರಾಮ, ಕನ್ನಡಗ್ರಾಮರಸ್ತೆ, ಕಾಸರಗೋಡು -671121
ಮೊಬೈಲ್ :-9448572016 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು.
ಕಾಸರಗೋಡು ಜಿಲ್ಲಾ7ನೇ ಚುಟುಕು ಸಾಹಿತ್ಯ ಸಮ್ಮೇಳನ 2025 – ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಗೆ ಆಹ್ವಾನ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25 ನೇ ವರ್ಷಾಚರಣೆಯ ಪ್ರಯುಕ್ತ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ,ಮೈಸೂರು ಇದರ ಮಾರ್ಗದರ್ಶನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರದಂದು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ.
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಂತರ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ವಾಚಿಸಲು ಇಚ್ಚಿಸುವವರು ತಮ್ಮ ಸ್ವರಚಿತ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ಬರೆದು,ತಮ್ಮ ಹೆಸರು,ವಿಳಾಸ, ಚುಟುಕು ಸ್ವಪರಿಚಯ, ಮೊಬೈಲ್ ಸಂಖ್ಯೆಯೊಂದಿಗೆ 2025 ಫೆಬ್ರವರಿ 28 ರ ಮುಂಚಿತವಾಗಿ ಸಾಮಾನ್ಯ ಅಂಚೆ ಮೂಲಕ ಕಳುಹಿಸಬೇಕು.
ಸಮ್ಮೇಳನದಲ್ಲಿ ಚುಟುಕು ಕವಿಗಳಿಗೆ ಪ್ರಮಾಣ ಪತ್ರ, ಸ್ಮರಣೆಕೆಯನ್ನು ನೀಡಿ ಗೌರವಿಸಲಾಗುವುದು, ಆಯ್ಕೆಯಾದ 60 ಮಂದಿ ಚುಟುಕು ಕವಿಗಳಿಗೆ ವಾಟ್ಸಪ್ ಗ್ರೂಪ್ ನಲ್ಲಿ ತಿಳಿಸಲಾಗುವುದು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಯ ಚುಟುಕು ಕವಿಗಳಿಗೆ ಅಂತರರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುವುದು.
ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಗ್ರಾಮ, ಕನ್ನಡ ಗ್ರಾಮರಸ್ತೆ ಕಾಸರಗೋಡು-671121 ಮೊಬೈಲ್ :-9448572016
ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು.
ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ -2025
ಹೊಸ ಕೃತಿಗಳ ಬಿಡುಗಡೆ ಅಹ್ವಾನ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ -2025 ರ ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ದಕ್ಷಿಣ ಕನ್ನಡ ಉಡುಪಿ, ಜಿಲ್ಲೆಯ ಚುಟುಕು ಕವಿಗಳು,ಬರಹಗಾರರು, ಲೇಖಕರು,ಕವಿ, ಸಾಹಿತಿಗಳ ಹೊಸ ಕೃತಿಗಳ ಬಿಡುಗಡೆಗೆ ಅವಕಾಶ ನೀಡಲಾಗಿದೆ.
ಆಸಕ್ತರು ತಮ್ಮ ಕೃತಿಯ ಹೆಸರು, ಚುಟುಕು ಸ್ವ ಪರಿಚಯ ಕೃತಿಯ ಸಂಕ್ಷಿಪ್ತ ಮಾಹಿತಿಯೊಂದಿಗೆ ಹತ್ತು ಪ್ರತಿಯನ್ನು ಶಿವರಾಮ ಕಾಸರಗೋಡು,ಅಧ್ಯಕ್ಷರು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಕನ್ನಡ ಗ್ರಾಮ, ಕನ್ನಡಗ್ರಾಮರಸ್ತೆ ಕಾಸರಗೋಡು-671121 ಈ ವಿಳಾಸಕ್ಕೆ ಅಂಚೆ ಮೂಲಕ 2025 ಫೆಬ್ರವರಿ 28 ರ ಒಳಗಾಗಿ ಕಳುಹಿಸಿ ಕೊಡಲು ಕೋರಲಾಗಿದೆ.
ಮೊಬೈಲ್ :-9448572016

RELATED ARTICLES
- Advertisment -
Google search engine

Most Popular