ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ವಾಚಿಸಿದ 108 ಕವಿಗಳಿಗೆ ಡಾ ಎಂ. ಜಿ. ಆರ್. ಅರಸ್ ಚುಟುಕು ಕಾವ್ಯ ಪ್ರಶಸ್ತಿ ಪ್ರದಾನ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ ಗಂಟೆ 11. 00 ಕ್ಕೆ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಮತ್ತು ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಪೂರ್ವಭಾವಿಯಾಗಿ ನಡೆಸಿದ ರಾಜ್ಯಮಟ್ಟದ ಚುಟುಕು ಸ್ಪರ್ಧೆ, ಚುಟುಕು ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದವರು ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ವಾಚನಕ್ಕೆ ಅವಕಾಶ ನೀಡಲಾಗುವುದು.
ಕೇರಳ ಮತ್ತು ಕರ್ನಾಟಕ ರಾಜ್ಯದ 108 ಚುಟುಕು ಕವಿಗಳು ಭಾಗವಹಿಸಲಿದ್ದು ನಿರಂತರ ಎರಡು ಗಂಟೆಗಳ ಕಾಲ (ಸ್ವರಚಿತ) ಚುಟುಕು ಕವಿಗಳಿಂದ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ವಾಚಿಸಲಿದ್ದಾರೆ.
ಚುಟುಕು ವಾಚಿಸಿದ ಕವಿಗಳಿಗೆ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25ನೇ – ಬೆಳ್ಳಿ ಹಬ್ಬ ವರ್ಷದ ಡಾ ಎಂ. ಜಿ. ಆರ್. ಅರಸ್ ಚುಟುಕು ಕಾವ್ಯ ಪ್ರಶಸ್ತಿ – ಪ್ರಮಾಣ ಪತ್ರ , ಶಾಲು, ಸ್ಮರಣಿಕೆ, ಸಾಹಿತ್ಯ,ಪುಸ್ತಕ, ಕವನ ಸಂಕಲನಗಳ ಕಿಟ್ ಮತ್ತು ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವರ ಭಾವಚಿತ್ರವನ್ನು ನೀಡಿ ಗೌರವಿಸಲಾಗುವುದು. ತೀರ್ಪುಗಾರರಿಂದ ಗುರುತಿಸಲ್ಪಟ್ಟ ಕವಿಗಳಿಗೆ ಪ್ರಥಮ, ದ್ವಿತೀಯ,ತೃತೀಯ ಸ್ಥಾನದಲ್ಲಿ ನಗದು ಪುರಸ್ಕಾರವನ್ನು ವಿವಿಧ ಪ್ರಾಯೋಜಕರು ನೀಡಲಿದ್ದಾರೆ. ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸುವವರು ಪ್ರಥಮವಾಗಿ ಹೆಸರನ್ನು ನೋಂದಾಯಿಸಿದವರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ,ಎ 4 ಅಳತೆಯ ಹಾಳೆಯಲ್ಲಿ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ಬರೆದು ರಾಜ್ಯಮಟ್ಟದ ಕವಿಗೋಷ್ಠಿಯಂದು ಬೆಳಿಗ್ಗೆ ಗಂಟೆ 10.00 ರ ಮುಂಚಿತವಾಗಿ ಸ್ವಾಗತ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು.
ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ವಾಚಿಸಿದ 108 ಚುಟುಕು ಕವಿಗಳ ಚುಟುಕುಗಳನ್ನು ಸಂಗ್ರಹಿಸಿ ಚುಟುಕು ಸಂಕಲನದ ಮೂಲಕ ಪರಿಚಯಿಸಲಾಗುವುದು. ಆದುದರಿಂದ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ದ್ವಿ ಪತ್ರಿಯಲ್ಲಿ ಚುಟುಕುಗಳನ್ನು ಬರೆದು ತರಬೇಕು. ತಮ್ಮ ಒಪ್ಪಿಗೆಯನ್ನು ಶಿವರಾಮ ಕಾಸರಗೋಡು ವಾಟ್ಸ್ ಪ್ ಮೊಬೈಲ್ ಸಂಖ್ಯೆ – 9448572016 ಇವರಿಗೆ ಕನ್ನಡದಲ್ಲಿ ಟೈಪ್ ಮಾಡಿ ಫಾರ್ವರ್ಡ್ ಮಾಡಬೇಕು.
ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು, ಅಧ್ಯಕ್ಷರು,ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,(ಮಧೂರು ದೇವಸ್ಥಾನ ಮುಖ್ಯ ರಸ್ತೆ) ಕಾಸರಗೋಡು – 671121
ಮೊಬೈಲ್ :-9448572016, 9901951965. ಇತಿಹಾಸ ಪ್ರಸಿದ್ಧವಾದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ಇದೇ 2025 ಮಾರ್ಚ್ 27ರಿಂದ ಏಪ್ರಿಲ್ 7 ರ ತನಕ ನಡೆಯಲಿದೆ.
ಪ್ರಾರಂಭದ ಈ ಪುಣ್ಯ ದಿನದಂದು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು 100 ಗಾಯಕ ಗಾಯಕಿಯರಿಂದ ಏಕ ಕಂಠ ಗಾಯನ,ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ,ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದವರಿಗೆಲ್ಲಾ ಸಮಾರೋಪ ಸಮಾರಂಭದ (ಸಂಜೆ ಗಂಟೆ 4. 00 ರ) ನಂತರ ಮಧೂರು ದೇವಸ್ಥಾನಕ್ಕೆ ಸಂದರ್ಶಿಸಲು ಅವಕಾಶವಿರುತ್ತದೆ. ಕಾಸರಗೋಡು ಕನ್ನಡ ಗ್ರಾಮದಿಂದ ಮಧೂರು ದೇವಸ್ಥಾನಕ್ಕೆ ನಾಲ್ಕು ಕಿಲೋಮೀಟರ್ ದೂರವಿರುತ್ತದೆ. ಈ ಮಾಧ್ಯಮ ಪ್ರಕಟಣೆಯನ್ನು ತಮ್ಮ ವಾಟ್ಸ್ ಪ್ ಬಳಗದ ಮೂಲಕ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಹಿರಿಯ, ಯುವ ಚುಟುಕು ಕವಿಗಳ ಸದಸ್ಯರಿಗೂ ಫಾರ್ವರ್ಡ್ ಮಾಡಿ ಪ್ರೋತ್ಸಾಹಿಸಿರಿ.
ಆತ್ಮೀಯರಲ್ಲಿ ಮನವಿ:- ನಮ್ಮೊಂದಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವ ಬಂಧುಗಳೆಲ್ಲರೂ, SHIVARAMA KASARAGOD GOOGLE PAY NUMBER -9448572016(ಗೂಗಲ್ ಪೇ ಯಲ್ಲಿ ದೇಣಿಗೆಯನ್ನು ಪಾವತಿಸಬಹುದು.)ಹಣ ಪಾವತಿಸಿದವರು ದಯವಿಟ್ಟು ವಾಟ್ಸಾಪ್ ಮೂಲಕ ಮಾಹಿತಿಯನ್ನು ಕಳುಹಿಸಿರಿ.
ಶಿವರಾಮ ಕಾಸರಗೋಡು ಅಧ್ಯಕ್ಷರು “ನಮ್ಮ ಕಾಸರಗೋಡು ಕನ್ನಡ ಗ್ರಾಮ – ನಮ್ಮ ಹೆಮ್ಮೆ “