ಕರ್ನಾಟಕ ಗಡಿನಾಡ ಉತ್ಸವ, ಬೆಂಗಳೂರು ಕನ್ನಡ ನಾಟಕೋತ್ಸವದ ಲಾಂಛನ, ಪ್ರಚಾರ ಭಿತ್ತಿ (ಪ್ರಚಾರ ಪೋಸ್ಟರ್ ) ಯನ್ನು ಬೆಳಗಾವಿ ಶಾಸಕ ಅಸೀಫ್ ಸೇಟ್ ರಿಂದ ಅನಾವರಣ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ರಜತ ಮಹೋತ್ಸವ ಸಂಭ್ರಮಾಚರಣೆ ಮತ್ತು ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ – 2025 ಹಾಗೂ ವಿ. ಕೆ. ಎಂ. ಕಲಾವಿದರು (ರಿ ), ಬೆಂಗಳೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು ಸಹಕಾರದಲ್ಲಿ ಕರ್ನಾಟಕ ಗಡಿನಾಡ ಉತ್ಸವ, 100 ಮಂದಿ ಗಾಯಕ, ಗಾಯಕಿಯರಿಂದ ಶತಕಂಠ ಗಾಯನ,ಸುಗಮ ಸಂಗೀತ ಗಾಯನ, ವಿಶ್ವ ರಂಗಭೂಮಿ ದಿನಾಚರಣೆ, ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರದಂದು ಬೆಳಿಗ್ಗೆ ಗಂಟೆ 6:30 ರಿಂದ ರಾತ್ರಿ 9:30 ತನಕ ಆಯೋಜಿಸಲಾಗಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು ಪ್ರಾಯೋಜಕತ್ವ ನೀಡಲಿದೆ.
ಬೆಳಗಾವಿಯ ಮಹಾಂತಭವನದಲ್ಲಿ ನಡೆದ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು ಡಾ. ಎಂ. ಅಕಬರ ಅಲಿ ಅವರ ಜನ್ಮ ಶತಮಾನೋತ್ಸವ ಹಾಗೂ ಬೆಳಗಾವಿ ಜಿಲ್ಲಾ 4 ನೇ ಚುಟುಕು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಬೆಳ್ಳಿ ಹಬ್ಬ ಸಂಭ್ರಮಾಚರಣೆ, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕರ್ನಾಟಕ ಗಡಿನಾಡ ಉತ್ಸವ, ಬೆಂಗಳೂರು ಕನ್ನಡ ನಾಟಕೋತ್ಸವದ ಲಾಂಛನ ಪ್ರಚಾರ ಭಿತ್ತಿ (ಪ್ರಚಾರ ಪೋಸ್ಟರ್ ) ಯನ್ನು ಬೆಳಗಾವಿ ಉತ್ತರ ಶಾಸಕ ಅಸೀಫ್ ಸೇಟ್ ಅವರು ಅನಾವರಣಗೊಳಿಸಿದರು.
ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಹಲವು ಕನ್ನಡ ಸಂಘಟನೆಗಳ ನೇತೃತ್ವವಹಿಸಿ ಕಾರ್ಯ ನಿರ್ವಹಿಸುತ್ತಿರುವುದನ್ನು ಅಭಿನಂದಿಸಿದರು.
ಪರಮ ಪೂಜ್ಯ ಶ್ರೀ ಗುರು ಸಿಧ್ದ ಮಹಾಸ್ವಾಮಿಗಳು, ಶ್ರೀ ಕಾರಂಜಿ ಮಠ, ಬೆಳಗಾವಿ ಸಾನಿಧ್ಯ ವಹಿಸಿದ್ದರು. ಈ
ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಸ್ಥಾಪಕ ರಾಜ್ಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್ ಅರಸ್ ಮೈಸೂರು,ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್. ಎಸ್. ಶಾಸ್ತ್ರಿ, ಬೆಳಗಾವಿ ಜಿಲ್ಲಾ 4 ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಪ್ಪಾ ಸಾಹೇಬ, ಅಲಿಬಾದಿ ಅಥಣಿ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು, ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಡಾ. ರತ್ನ ಹಾಲಪ್ಪ ಗೌಡ ಹಾಗೂ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಎಸ್.ಎಂ ಕುಲಕರ್ಣಿ, ವಿ.ಎನ್. ಜೋಶಿ, ಬಾಸೂರು ತಿಪ್ಪೇಸ್ವಾಮಿ, ಅಶೋಕ ಮಳಗಲಿ, ಆನಂದ ಪುರಾಣಿಕ , ಡಾ. ಸಿ. ಕೆ. ಜೋರಾಪೂರ,ಬಸವರಾಜ ಗಾರ್ಗಿ,ಡಾ. ಅನ್ನಪೂರ್ಣ ಹಿರೇಮಠ, ರವಿ ಎಸ್.ಸಿ ಕೋಟಾರಗಸ್ತಿ, ಡಾ. ಪಿ. ಜಿ. ಕೆಂಪಣ್ಣ, ಬೆಳಗಾವಿ, ಬಿ.ಆರ್. ಪೊಲೀಸ್ ಪಾಟೀಲ ಬನಹಟ್ಟಿ ಬಾಗಲಕೋಟೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ರಾಜ್ಯ, ಜಿಲ್ಲಾ ,ತಾಲೂಕು ಘಟಕಗಳ ಪದಾಧಿಕಾರಿಗಳು,ಕವಿ, ಸಾಹಿತಿಗಳು, ಸಾಹಿತ್ಯಾಸಕ್ತರು, ಅನೇಕ ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯದ ವಿವಿಧ ಜೆಲ್ಲೆಗಳಿಂದ 100 ಕ್ಕೂ ಅಧಿಕ ಚುಟುಕು ಕವಿಗಳು, ಸಾಹಿತಿಗಳು, ಬರಹಗಾರರು, (ಕವಿಗಳು, ಪುಸ್ತಕ)ಪ್ರಕಾಶಕರು ಪತ್ರಕರ್ತರು, ಸಾಹಿತ್ಯಾಸಕ್ತರು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳು ಹಾಗೂ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
