Thursday, May 1, 2025
Homeಕಾಸರಗೋಡುಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25ನೇ - ರಜತ ಮಹೋತ್ಸವ ವರ್ಷ

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25ನೇ – ರಜತ ಮಹೋತ್ಸವ ವರ್ಷ

ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ವಾಚಿಸಿದ 108 ಕವಿಗಳಿಗೆ ಡಾ. ಎಂ. ಜಿ. ಆರ್. ಅರಸ್ ಚುಟುಕು ಕಾವ್ಯ ಪ್ರಶಸ್ತಿ ಪ್ರದಾನ ಓ ಕವಿಗಳೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಚುಟುಕು ಸಾಹಿತ್ಯದ ಪ್ರಚಾರ ಪ್ರಸಾರ ಪ್ರಕಟಣೆಯ ಉದ್ದೇಶದಿಂದ ಡಾ. ಎಂ. ಜಿ. ಆರ್. ಅರಸ್ ಅವರು ಚುಟುಕು ಸಾಹಿತ್ಯ ಪರಿಷತ್ತನ್ನು ಮೈಸೂರಿನಲ್ಲಿ 30 ವರ್ಷಗಳ ಹಿಂದೆ ಸ್ಥಾಪಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಖ್ಯಾತ ಆಯುರ್ವೇದ ವೈದ್ಯಾಧಿಕಾರಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಸ್ಥಾಪಕ ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಎಂ. ಜಿ. ಆರ್. ಅರಸ್ (ಡಾ. ಮೋಹನ ಗೋಪಾಲ ರಾಜೇ ಅರಸ್ ) ನವರು 2025 ಏಪ್ರಿಲ್ 13 ಕ್ಕೆ 81 ವರ್ಷ (13-04-1945) ಪೂರೈಸುತಿದ್ದಾರೆ. ಡಾ. ಎಂ. ಜಿ. ಆರ್. ಅರಸ್ ಸ್ಥಾಪಿಸಿದ ಚುಟುಕು ಸಾಹಿತ್ಯ ಪರಿಷತ್ ಬೆಳಗಾವಿ ಮತ್ತು ಕಾಸರಗೋಡು ಜಿಲ್ಲಾ ಚು.ಸಾ.ಪ ಘಟಕವು ರಜತ ಮಹೋತ್ಸವ ವರ್ಷವನ್ನು 2025 ರಲ್ಲಿ ಆಚರಿಸುತ್ತಿದೆ.

ಚುಟುಕು ಯುಗಾಚಾರ್ಯ ಡಾ. ಎಂ. ಜಿ. ಆರ್. ಅರಸ್ ಮೈಸೂರು ಅವರ ಹೆಸರಿನಲ್ಲಿ ವರ್ಷoಪ್ರತಿ ಚುಟುಕು ಸಾಹಿತ್ಯ ರಚನೆಯಲ್ಲಿ ಅಧ್ಯಯನ ನಡೆಸಿ ಚುಟುಕುಗಳನ್ನು ಬರೆಯುವ ಯುವ ಹಿರಿಯ ಕವಿಗಳನ್ನು ಗುರುತಿಸಿ ಗೌರವಿಸುವುದು, ಚುಟುಕು ಸಾಹಿತ್ಯ ಕೃತಿಗಳ ಪ್ರಕಟಣೆ,ಪ್ರಕಾಶನ ಕ್ಷೇತ್ರದಲ್ಲಿ ದೇಶದಾದ್ಯಂತ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಅವರ ಗಣನೀಯ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ “ಡಾ. ಎಂ. ಜಿ. ಆರ್. ಅರಸ್ ಚುಟುಕು ಸಾಹಿತ್ಯ ಪ್ರಶಸ್ತಿ” ನೀಡಲು ಉದ್ದೇಶಿಸಲಾಗಿದೆ.

ಈ ಮಾಧ್ಯಮ ಪ್ರಕಟಣೆಯನ್ನು ತಮ್ಮ ವಾಟ್ಸ್ ಪ್ ಬಳಗದ ಮೂಲಕ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಸರ್ವ ಸದಸ್ಯರಿಗೂ ಫಾರ್ವಡ್ ಮಾಡಿ ಪ್ರೋತ್ಸಾಹಿಸಿರಿ. ಶಿವರಾಮ ಕಾಸರಗೋಡು, ವಾಟ್ಸ್ ಪ್ ಮೊಬೈಲ್ : 9448572016 ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರದಂದು ನಡೆಯುವ ಒಂದು ದಿನದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25ನೇ – ರಜತ ಮಹೋತ್ಸವ ಸಂಭ್ರಮಾಚರಣೆ ಮತ್ತು ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಮತ್ತು ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಠಿಯಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯದ ಚುಟುಕು ಕವಿಗಳು ಭಾಗವಹಿಸುವ ಬಗ್ಗೆ,ಒಪ್ಪಿಗೆ ಪತ್ರ ಸಹಿತ ಎ 4 ಅಳತೆಯ ಹಾಳೆಯಲ್ಲಿ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ಬರೆದು ತಮ್ಮ ಹೆಸರು, ವಿಳಾಸ, ಮೊಬೈಲ್, ವಾಟ್ಸಪ್ ಸಂಖ್ಯೆ ಮತ್ತು ನಾಲ್ಕು ಸಾಲಿನ ಚುಟುಕು ಪರಿಚಯ ಪತ್ರವನ್ನು ಬರಹ ಮೂಲಕ ದಿನಾಂಕ 15 ಮಾರ್ಚ್ 2025ರ ಮುಂಚಿತವಾಗಿ ಸಾಮಾನ್ಯ ಅಂಚೆ ಮೂಲಕ ಕಳುಹಿಸಬೇಕು.

ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ವಾಚಿಸಿದ ಹಿರಿಯ,ಯುವ ವಿದ್ಯಾರ್ಥಿಗಳಾದ 108 ಮಂದಿ ಚುಟುಕು ಕವಿಗಳಿಗೆ “ಚುಟುಕು ಯುಗಾಚಾರ್ಯ ಡಾ. ಎಂ. ಜಿ. ಆರ್. ಅರಸ್ ಚುಟುಕು ಕಾವ್ಯ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುವುದು.

ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ವಾಚಿಸಿದ 108 ಚುಟುಕು ಕವಿಗಳ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ಸಂಗ್ರಹಿಸಿ, ಚುಟುಕು ಸಂಕಲನವನ್ನು ಪ್ರಕಟಿಸಲು ಯೋಜಿಸಲಾಗಿದೆ.
ತೀರ್ಪುಗಾರರಿಂದ ಗುರುತಿಸಲ್ಪಟ್ಟ ಚುಟುಕು ಕವಿಗಳಿಗೆ ಪ್ರಥಮ,ದ್ವಿತೀಯ, ತೃತೀಯ ಸ್ಥಾನದಲ್ಲಿ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಗುವುದು.

RELATED ARTICLES
- Advertisment -
Google search engine

Most Popular