ಕಾಸರಗೋಡು :ಇತಿಹಾಸ ಪ್ರಸಿದ್ದ ಕಾಸರಗೋಡು ಕೋಟೆ ಚಾವಡಿ ಶ್ರೀ ದೂಮಾವತಿ ದೈವಕೋಲ, ಯಾನೆ ದೀಪಾವಳಿ ನೇಮೋತ್ಸವದ ತಯಾರಿಯ ಬಗ್ಗೆ ಸಮಾಲೋಚನಾ ಸಭೆ ನಡೆಯಿತು. ನಾಗರಕಟ್ಟೆಯ ಶ್ರೀ ಶಾರದಾಂಬಾ ಭಜನಾಶ್ರಮ ಪರಿಸರದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಶ್ರೀ ದೂಮಾವತಿ ಉತ್ಸವ ಸಮಿತಿ ಅಧ್ಯಕ್ಷರಾಧ ಶ್ರೀ ನವೀನ್ ನಾಯಕ್, ನಾಯಕರ ಮನೆ ವಹಿಸಿದ್ದರು. ಕಾರ್ಯದರ್ಶಿ ಮೋಹನ್ ದಾಸ್ ಕೊರಕೋಡು ನೇಮೋತ್ಸವ ದ ರೂಪುರೇಖೆ, ಹಾಗೂ ಕಾರ್ಯಕ್ರಮ ಗಳ ಬಗ್ಗೆ ವಿಷಧೀಕರಿಸಿದರು. ದಿನೇಶ್ ನಾಗರಕಟ್ಟೆ, ರಾದಾಕೃಷ್ಣ ಹೊನ್ನೇಮೂಲೆ, ವಿನೋದ್ ಕುಮಾರ್ ನಾಗರಕಟ್ಟೆ, ದಾಮೋದರ ಆರಿಕ್ಕಾಡಿ, ಕೇಶವ ನಾಗರಕಟ್ಟೆ,ನಿತಿನ್ ನಾಗರಕಟ್ಟೆ, ಉದಯಕುಮಾರ್ ನಾಗರಕಟ್ಟೆ, ಧನುಷ್ ನಾಗರಕಟ್ಟೆ, ಕೌಶಿಕ್ ನಾಯಕ್, ಪ್ರಜ್ವಲ್ ನಾಯಕ್, ಪುನೀತ್ ನಾಗರಕಟ್ಟೆ, ಸಲಹೆ ಸೂಚನೆಗಳನ್ನಿತರು. ಪ್ರದೀಪ್ ನಾಯಕ್ ಸ್ವಾಗತಿಸಿ ಭಟ್ಟರಾಜ ನಾಗರಕಟ್ಟೆ ವಂದಿಸಿದರು. ಸಮಿತಿ ಕೋಶಾಧಿಕಾರಿ ಪಾಂಗೋಡು ಕ್ಷೇತ್ರ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು.