Sunday, January 19, 2025
Homeಕಾಸರಗೋಡುಕಾಸರಗೋಡು: ಜ. 7ರಂದು ಕನ್ನಡ ಭವನದಲ್ಲಿ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ದ್ರಾವಿಡ ಭಾಷಾ ವಿಚಾರ...

ಕಾಸರಗೋಡು: ಜ. 7ರಂದು ಕನ್ನಡ ಭವನದಲ್ಲಿ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ದ್ರಾವಿಡ ಭಾಷಾ ವಿಚಾರ ಸಂಕಿರಣ

ಕಾಸರಗೋಡು: ಲೇಖಕಿ, ದ್ರಾವಿಡ ಭಾಷಾ ಸಂಶೋಧಕಿ, ದ್ರಾವಿಡ ಭಾಷಾ ಅನುವಾದಕ ಸಂಘ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಬೆಂಗಳೂರು ಇವರು, ಇಡಶೇರಿ ಗೋವಿಂದನ್ ನಾಯರ್ ಬರೆದ “ಪೂತಪ್ಪಾಟ್” ಎಂಬ ಮಲಯಾಳಂ ಕೃತಿಯ ಕನ್ನಡ ಅನುವಾದ ಕೃತಿಯಾದ “ಭೂತದ ಹಾಡು ” ಎಂಬ ಕನ್ನಡ ಕೃತಿ ಕನ್ನಡ ಭವನದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನುವಾದ ಸಾಹಿತಿ ಕೆ. ವಿ. ಕುಮಾರನ್ ಮಾಸ್ಟರ್ ಅವರು ಜ. 7ರಂದು ಸಂಜೆ 5 ಗಂಟೆ ಬಿಡುಗಡೆಗೊಳಿಸಲಿದ್ದಾರೆ.

ಡಾ. ಸುಷ್ಮಾ ಶಂಕರ್ ಅನುವಾದ ಸಾಹಿತ್ಯದ ಬಗ್ಗೆ ವಿಚಾರ ಮಂಡಿಸುವರು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಈ ವೇದಿಕೆಯಲ್ಲಿ ಡಾ. ಸುಷ್ಮಾ ಶಂಕರ್ ರೀಗೆ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ “ನೀಡಿ ಪುರಸ್ಕರಿಸಲಿದೆ. ಕಾಸರಗೋಡಿನ ಹಿರಿಯ ಸಾಹಿತಿಗಳು, ಕವಿಗಳು, ಭಾಷಾಭಿಮಾನಿಗಳು, ಸಾಹಿತ್ಯಭಿಮಾನಿಗಳು ಕಾರ್ಯಕ್ರಮ ದಲ್ಲಿ ಪಾಲುಗೊಳ್ಳಲಿದ್ದಾರೆ ಎಂದು ಕನ್ನಡ ಭವನ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular