ಕಾಸರಗೋಡು :ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ ಪ್ರತಿಷ್ಠಿತ ಯುವ ಪ್ರತಿಭಾ ಪ್ರಶಸ್ತಿಯಾದ ಭರವಸೆಯ ಬೆಳಕು /ಲೈಟ್ ಒಫ್ ಹೋಪ್ಸ್, ಸ್ಟೂಡೆಂಟ್ ಅಚೀವ್ಮೆಂಟ್ ಅವಾರ್ಡ್ 2024.ಈ ಬಾರಿ ಕಾಸರಗೋಡು ಪಾಂಗೋಡು ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಸಭಾ ಅಂಗಣದಲ್ಲಿ 3.10.2024 ರಿಂದ 12.10.2024.ರ ವರೆಗೆ ನಡೆಯಲಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2024.ವೇದಿಕೆಯ 6.10.2024 ಭಾನುವಾರ 2 ಗಂಟೆಗೆ ನಡೆಯುವ ಕಾಸರಗೋಡು ದಸರಾ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಸತ್ಯಶಾಂತ ಪ್ರತಿಷ್ಠಾನ ಮೂಡುಬಿದ್ರೆ ಇವರ “ಗಾನ ಲಹರಿ “ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ನಡೆಯಲಿದೆ. ವಿ. ಸೂ. ಈ ಬಾರಿಯ ಯುವಪ್ರತಿಭಾ ಪ್ರಶಸ್ತಿ ಯನ್ನು ಶಿಕ್ಷಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರಿಗಣಿಸಲಾಗಿದೆ. ಕಾಸರಗೋಡು ಜಿಲ್ಲೆಯ ಆಯ್ದ 15 ಪದವಿ ಮತ್ತು ತಾಂತ್ರಿಕ ಕಾಲೇಜಿನ ತಲಾ ಎರಡು ಅತ್ಯುನ್ನತ ವಿದ್ಯಾರ್ಥಿಗಳಿಗೆ “ಲೈಟ್ ಒಫ್ ಹೋಪ್ಸ್ “ಸ್ಟೂಡೆಂಟ್ ಅಚೀವ್ಮೆಂಟ್ ಅವಾರ್ಡ್ 2024.ನೀಡಲಾಗುತ್ತಿದೆ. ಆಯ್ಕೆ ಆಯಾ ಕಾಲೇಜಿನ ವ್ಯವಸ್ಥಾಪಕ ಮಂಡಳಿಗಳದ್ದಾಗಿರುತ್ತದೆ. ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದ ಹಾಗೂ ಪಠ್ಯಇತರ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡವರಾಗಿರಬೇಕಾಗಿರುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು, ಭಾವಚಿತ್ರ, ಕಾಲೇಜು ಅಧಿಕೃತರ ಶಿಫಾರಸ್ಸು ಪತ್ರ, ಕಾಲೇಜಿನ ಹೆಸರಿನೊಂದಿಗೆ, 9633073400,,9746093552.ಮೊಬೈಲ್ ನಂಬರೀಗೆ ಕರೆಮಾಡಿ ವಾಟ್ಸಪ್ ಮೂಲಕ ಕಳುಹಿಸಬೇಕು. ಎಂದು ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ಸಂಚಾಲಕರೂ, ಕನ್ನಡ ಭವನ ಕಾಸರಗೋಡಿನ ಅಧ್ಯಕ್ಷರೂ ಆದ ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.