ಕಾಸರಗೋಡು: ಸಂಘಟನೆ, ಶಿಕ್ಷಣ ಕ್ಷೇತ್ರ, ರಂಗ ಕಲೆ, ಹಾಗೂ ಬಹುಮುಖ ಕ್ಷೇತ್ರಗಳಲ್ಲಿ ಸಾಧನೆಯನ್ನು ಗೈಯುತ್ತಿರುವ ಶಿಕ್ಷಕ ಗಣಪತಿ ಹೋಬಳಿದಾರ್ ಅವರಿಗೆ ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ವತಿಯಿಂದ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2024.” ನೀಡುತ್ತೇವೆ ಎಂದು ಕಾರ್ಯಕ್ರಮ ಪ್ರಯೋಜಕರಾದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
ಜ. 4ರಂದು ಕೋಲಾರ ಪತ್ರಕರ್ತರ ಭವನದಲ್ಲಿ ನಡೆಯುವ ವಿಶ್ವಮಾನವ ಕುವೆಂಪು ಜನ್ಮ ಆಚರಣೆ ಭಾಗವಾಗಿ ಕೋಲಾರದ ಸ್ವರ್ಣಭೂಮಿ ಫೌಂಡೇಶನ್, ರೋಟರಿ ಕ್ಲಬ್ ಕೋಲಾರ ಮತ್ತು ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸಾರತ್ಯದ ಕಾಸರಗೋಡು ಕನ್ನಡ ಭವನ ಗ್ರಂಥಾಲಯದ “ಕಾಸರಗೋಡು -ಕೋಲಾರ ಕನ್ನಡ ಉತ್ಸವ ವೇದಿಕೆಯಲ್ಲಿ ಗಣಪತಿ ಹೋಬಳಿದಾರ್ ಬೈಂದೂರು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕಾರ್ಯಕ್ರಮ ಪ್ರಯೋಜಕರಾದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮಾಹಿತಿ ನೀಡಿದ್ದಾರೆ.