Monday, January 20, 2025
HomeUncategorizedಕಾಸರಗೋಡು - ಕೋಲಾರ ಕನ್ನಡ ಉತ್ಸವ ಸಂಪನ್ನ

ಕಾಸರಗೋಡು – ಕೋಲಾರ ಕನ್ನಡ ಉತ್ಸವ ಸಂಪನ್ನ

ಕವಿಮಾನ್ಯರೀಗೆ ಗೌರವ

ಪ್ರತಿಜ್ಞಾಬದ್ದವಾಗಿ ಕನ್ನಡ ಭಾಷೆಯನ್ನು ಕನ್ನಡಿಗರು ಬಳಸಿಕೊಂಡರೆ ಮಾತ್ರ ಕನ್ನಡ ಉಳಿಯಬಲ್ಲುದು, ಎಂದು ಕೋಲಾರದ ಸಿವಿಲ್ ನ್ಯಾಯಾದೀಶರಾದ ಹರ್ಷ. ಜಿ ಹೇಳಿದರು. ಇವರು ಕೋಲಾರ ಪತ್ರಕರ್ತರ ಭವನದಲ್ಲಿ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ನಡೆದ “ಕಾಸರಗೋಡು -ಕೋಲಾರ ಕನ್ನಡ ಉತ್ಸವ, “ಕಾರ್ಯಕ್ರಮ ವನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದರು.
ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್, ರೋಟರಿ ಕ್ಲಬ್ ಕೋಲಾರ, ಡಾ. ಕೆ ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನ ಸಂಯುಕ್ತವಾಗಿ ಆಯೋಜಿಸಿದ ಕಾರ್ಯಕ್ರಮವನ್ನು ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಗಾಯನ ತಂಡಕ್ಕೆ ಗೌರವ


ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ಹಸ್ತಾo ತರಿಸುವ ಗುರುತರ ಹೊಣೆಗಾರಿಕೆ ಸಂಘ, ಸಂಸ್ಥೆಗಳಿಗಿದೆ ಸಂಘ ಸಂಸ್ಥೆಗಳು ಪರಸ್ಪರ ಸಹಕರಿಸಿ ಕನ್ನಡ ಕಾರ್ಯಗಳನ್ನು ಮಾಡಬೇಕಿದೆ. ಎಂದು ಹೇಳಿದರು. ಕಾರ್ಯಕ್ರಮವನ್ನು ಬಿ. ಶಿವಕುಮಾರ್ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಕಾಸರಗೋಡು ಕನ್ನಡ ಭವನದ ಅಂತರ್ ರಾಜ್ಯ ಪ್ರತಿಷ್ಠಿತ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ ಗಣ್ಯ ಸಾಹಿತಿ, ಕಲಾವಿದರು, ಸಂಘಟಕರು, ಆದ ರೋ. ಸಿ. ಆರ್. ಅಶೋಕ್, ಶಾಂತಮ್ಮ, ರೋ. ನಾಗನಂದ ಕೆಂಪರಾಜ್, ರೋ. ಹೆಚ್. ರಾಮಚಂದ್ರಪ್ಪ, ಡಾ. ಪೋಸ್ಟ್ ನಾರಾಯಣ ಸ್ವಾಮಿ, ಪಿ. ನಾರಾಯಣಪ್ಪ, ಗಣಪತಿ ಹೋಬಳಿದಾರ್ ಬೈಂದೂರು,ಡಾ. ಕೈವಾರ ಶ್ರೀನಿವಾಸ ಇವರಿಗೆ ನೀಡಲಾಯಿತು.
ಗಿರೀಶ್ ಎಂ. ಎಸ್. ಶೋಭಾ ಕೆ. ಎಸ್., ಎಂ. ಆನಂದ ರೆಡ್ಡಿ, ಡಾ. ಮುನಿರಾಜು ಎಂ. ವೆಂಕಟರಾಜು, ರೇಖಾ ಸುದೇಶ್ ರಾವ್ ಮಂಗಳೂರು, ನಾರಾಯಣ ಸ್ವಾಮಿ, ರವೀಂದ್ರನ್ ಪಾಡಿ, ನಾಗರಾಜ್ ಮದ್ದೋಡಿ, ಶಿವಾನಂದ ಮಂದಾನವರ, ಬಿ. ಕೆ. ನಾಗರಾಜ, ಸುರಕ್ಷಿತ ಗೌಡ, ಕುಮಾರಸಿದ್ದ ಪುಂಡಲೀಕ ಪುಲಾರಿ, ಮನೋಜ್ ಕುಮಾರ್, ಇವರಿಗೆ ವಿಶ್ವಮಾನವ ಕುವೆಂಪು ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ರೋ. ನಾಗನಂದ ಕೆಂಪರಾಜು, ರೋ. ಎಸ್. ವಿ. ಸುಧಾಕರ್, ಕೆ. ಎಸ್. ಗಣೇಶ್, , ಬಿಜ್ಜಾವರ ಸುಬ್ರಮಣ್ಯ, ವಿ. ಲಕ್ಷ್ಮಯ್ಯ, ಡಾ. ಇಂಚರ ನಾರಾಯಣ ಸ್ವಾಮಿ, ಡಾ. ಶರಣಪ್ಪ ಗಬ್ಬೂರ್, ಶ್ರೀ ಅಜಯ್ ಕುಮಾರ್ ಎ., ರೋ. ಬಿ. ಕೆ. ದೇವರಾಜ್, ಮುನೇಗೌಡ ಎಂ. ರೋ. ಎಸ್. ಎಂ. ಚಂದ್ರಶೇಖರ ಇವರು, ಟಿ. ಸುಬ್ಬರಾಮಯ್ಯ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಿಗೋಷ್ಠಿ ಯಲ್ಲಿ ಭಾಗವಹಿಸಿದ ರಾದ ಡಾ. ಪ್ರಕಾಶ್, ಡಾ. ನಂಜಪ್ಪ, ಪ್ರಸನ್ನಕುಮಾರ್, ಗೀತಾ ಜಿ. ಗುಲಾಬಿ ರಾಘವೇಂದ್ರ, ರೂಪ ಶಿವಕುಮಾರ್, ಶಾಂತಮ್ಮ, ರಾಜಕುಮಾರ, ಕಾವ್ಯಪ್ರಸಾದ್, ಕುವೆಂಪು ಬಗ್ಗೆ ಕವಿತೆ ಪ್ರಸ್ತುತ ಪಡಿಸಿದರು ಇವರೀಗೆ ಸ್ಮರಣಿಕೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕು. ನಿಶ್ಚಲ ಮೇರು ಮಟ್ಟದ ಭರತನಾಟ್ಯ ಪ್ರದರ್ಶನ ನೀಡಿದರು. ಗೀತ ಗಾಯನದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರನ್ನು ಗೌರವಿಸಲಾಯಿತು. ರೇಣುಕಾ ಎಂ. ಕೋಲಾರ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಕುಮಾರ್ ಎಂ. ವಂದಿಸಿದರು.

RELATED ARTICLES
- Advertisment -
Google search engine

Most Popular