ವಿಶ್ವ ರಾಮಕ್ಷತ್ರಿಯ ಮಹಾಸಂಘ ದ ಪದಾಧಿಕಾರಿಗಳಾದ ರೇಖಾ ಸುದೇಶ್ ರಾವ್, ಮತ್ತು ನಾಗರಾಜ್ ಮದ್ದೋಡಿ, ಯವರೀಗೆ ಕೋಲಾರ ಪತ್ರಿಕಾ ಭವನದಲ್ಲಿ 04.01.2024ರಂದು ನಡೆಯಲಿರುವ ವಿಶ್ವಮಾನವ ಕುವೆಂಪು ಜನ್ಮ ಉತ್ಸವದ ಪ್ರಯುಕ್ತ ಕೋಲಾರದ ಸ್ವರ್ಣಭೂಮಿ ಫೌಂಡೇಶನ್, ರೋಟರಿ ಕ್ಲಬ್ ಕೋಲಾರ, ಹಾಗೂ ಕಾಸರಗೋಡು ಕನ್ನಡ ಭವನ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ “ಕಾಸರಗೋಡು -ಕೋಲಾರ ಕನ್ನಡ ಉತ್ಸವದಲ್ಲಿ “ವಿಶ್ವ ಮಾನವ ಕುವೆಂಪು ಕನ್ನಡ ರತ್ನ ಪ್ರಶಸ್ತಿ “ಲಭಿಸಲಿರುವುದು.
ಸಂಘಟನೆ ಕ್ಷೇತ್ರದಲ್ಲಿ ಕವಯತ್ರಿ, ಸಂಘಟಕಿ, ಸಮಾಜಸೇವಕಿ, ರೇಖಾ ಸುದೇಶ್ ರಾವ್ ಆಯ್ಕೆಯಾಗಿದ್ದರೆ, ಶಿಕ್ಷಣ ಕ್ಷೇತ್ರ, ಸಂಘಟನೆ, ಸಮಾಜಸೇವೆ ವಿಭಾಗದಲ್ಲಿ ನಾಗರಾಜ್ ಮದ್ದೋಡಿ ಆಯ್ಕೆಯಾಗಿದ್ದಾರೆ. ಈರ್ವರೂ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ, ಪ್ರಶಸ್ತಿಯು ಇವರ ಮುಂದಿನ ಸಮಾಜಮುಖಿ ಕೆಲಸಗಳಿಗೆ ಸ್ಫೂರ್ತಿ ತುಂಬಲಿ ಎಂದು ಕಾಸರಗೋಡು -ಕೋಲಾರ ಕನ್ನಡ ಉತ್ಸವದ ರೂವಾರಿಗಳಾದ ಬಿ. ಶಿವಕುಮಾರ್ ಕೋಲಾರ ಹಾಗೂ ಕಾಸರಗೋಡು ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಆಶಯ ವ್ಯಕ್ತ ಪಡಿಸಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್. ಆರ್. ಶಶಿಧರ್ ನಾಯ್ಕ್ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ