ಕಾಸರಗೋಡು: ದ್ರಾವಿಡ ಭಾಷಾ ಅನುವಾದಕರ ಸಂಘ ಹಾಗೂ ಕಾಸರಗೋಡು ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯದ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಮಾರ್ಚ್ 9 ರಂದು ಒಂದು ದಿನದ ಭಾಷಾಂತರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಖ್ಯಾತ ಭಾಷಾಂತರಕಾರರು ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲಯಾಳಂಗೆ ಭಾಷಾಂತರ ಮಾಡುವಾಗ ಎದುರಿಸ ಬೇಕಾದ ಸಮಸ್ಯೆಗಳನ್ನು ಕುರಿತು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ.
ಕನ್ನಡ ಮತ್ತು ಮಲಯಾಳಂ ಓದಲು ಮತ್ತು ಬರೆಯಲು ತಿಳಿದಿರುವ ಮತ್ತು ಅನುವಾದದಲ್ಲಿ ಆಸಕ್ತಿಯುಳ್ಳವರು ಫೆಬ್ರವರಿ 28 ರೊಳಗೆ ಈ ಕೆಳಗಿನ ಸಂಖ್ಯೆಗಳಲ್ಲಿ ಒಂದನ್ನು ಸಂಪರ್ಕಿಸಬೇಕು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ನೋಂದಣಿ ಶುಲ್ಕವಿಲ್ಲ. ಆಹಾರ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ.ಸುಷ್ಮಾ ಶಂಕರ್, ಗ್ರಂಥಾಲಯ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಡಿಬಿಟಿಎ ಮಲಯಾಳಂ ಸಂಯೋಜಕ ರವೀಂದ್ರನ್ ಪಾಡಿ ಮಾಹಿತಿ ನೀಡಿದರು. 9901041889, 9633073400, 9947848346.