ಕಾಸರಗೋಡು “ಯಕ್ಷಗಾನ ಹಿಮ್ಮೇಳ ತರಗತಿ ಉದ್ಘಾಟನೆ-2024”

0
104

ಕಾಸರಗೋಡು: ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಈ ವರ್ಷದ ನಾಟ್ಯ ತರಗತಿ ಮತ್ತು ಹೊಸದಾಗಿ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಯಕ್ಷರಂಗದ ಖ್ಯಾತ ಕಲಾವಿದರಾದ ಶ್ರೀ ರಾಧಾಕೃಷ್ಣ ನಾವಡ ಮಧೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನದ ಮಹತ್ವದ ಕುರಿತು ವಿಸ್ತಾರವಾಗಿ ನುಡಿದರು ಅಧ್ಯಕ್ಷರಾಗಿ ತರಬೇತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಕೆ.ಎನ್. ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಹಿಮ್ಮೇಳ ಗುರುಗಳಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ರಾಘವ ಬಲ್ಲಾಳ್ ಕಾರಡ್ಕ, ನಾಟ್ಯ ಗುರುಗಳಾದ ರಾಕೇಶ್ ರೈ ಅಡ್ಕ, ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಕಲಾ ಸಂಘದ ಅಧ್ಯಕ್ಷರಾದ ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ನಾಟ್ಯತರಬೇತಿ ಉಚಿತವಾಗಿಯೂ ನೀಡುತ್ತಿದ್ದು ಹಿಮ್ಮೇಳ ತರಗತಿಗೆ ಸಣ್ಣ ಶುಲ್ಕವನ್ನಿರಿಸಿ ತರಬೇತಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೊಳ್ಳ ಇವರು ಸ್ವಾಗತಿಸಿ ಕಿಶೋರ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here