ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಭಾ ಮಂಟಪದಲ್ಲಿ ಅ.11ರಂದು ಸಂಜೆ ಏಳು ಗಂಟೆಗೆ ನಡೆಯುವ ʼಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2024ʼ ವೇದಿಕೆಯಲ್ಲಿ ಕಲಾವಿದೆ, ಕವಯತ್ರಿ, ಸಂಘಟಕಿ ಡಾ. ವಾಣಿಶ್ರೀ ಕಾಸರಗೋಡು ಮತ್ತು ಕಲಾವಿದ, ಕವಿ, ಸಂಘಟಕ, ಗಾಯಕ ಗುರುರಾಜ್ ಕಾಸರಗೋಡು ಅವರಿಗೆ ʻಕಾಸರಗೋಡು ದಸರಾ ವಿಶೇಷ ಸನ್ಮಾನʼ ನಡೆಯಲಿದೆ. ಗುರುರಾಜ್ ಕಾಸರಗೋಡು ನೇತೃತ್ವದ, ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ತಂಡದ ನೃತ್ಯ ಗಾನ ವೈಭವ ಇದೇ ವೇಳೆ ನಡೆಯಲಿದೆ.
ವೇದಿಕೆಯಲ್ಲಿ ಅಂತರ್ ಸಂಸ್ಥಾನ ನೆಲೆಯಲ್ಲಿ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳೊಂದಿಗೆ ಸುಮಾರು 300 ಕಲಾವಿದರಿಗೆ ವೇದಿಕೆ ಕಲ್ಪಿಸಿ, ಸಾಪಲ್ಯತೆಯ ಸವಿಶೇಷತೆಯೊಂದಿಗೆ, ಮುನ್ನೆಲೆಗೆ ದಾವಿಸುತ್ತಿರುವ ಡಾ ವಾಣಿಶ್ರೀ ಕಾಸರಗೋಡು ಮತ್ತು ಶ್ರೀ ಗುರುರಾಜ್ ಕಾಸರಗೋಡು ಇವರೀಗೆ ಕಾಸರಗೋಡು ದಸರಾ ವಿಶೇಷ ಸನ್ಮಾನ ನೀಡಿ ಗೌರವಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು, ಸಾಹಿತ್ಯ ಅಭಿಮಾನಿಗಳು ಬಂದು ಪ್ರೋತ್ಸಾಹಿಸಬೇಕಾಗಿ, ಕಾಸರಗೋಡು ದಸರಾ ಪ್ರದಾನ ಸಂಚಾಲಕಾರೂ, ಕನ್ನಡ ಭವನ ಕಾಸರಗೋಡಿನ ಸ್ಥಾಪಕ ಅಧ್ಯಕ್ಷರೂ, ದೇವಸ್ಥಾನ ಸಮಿತಿ ಅಧ್ಯಕ್ಷರೂ ಆದ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.