ದಾವಣಗೆರೆ,ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಮಹಾನ್ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾನಂದರ 182ನೇ ಜನ್ಮದಿನಾಚರಣೆ ನಿಮಿತ್ಯ ಫೆಬ್ರವರಿ 6 ರಂದು ಅಂತರ್ಜಾಲ ತಾಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ನಾಡು, ನೆಲ, ಜಲ, ಸಂಸ್ಕೃತಿ, ಯಕ್ಷಗಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅನವರತವಾಗಿ ಕಠಿಣ ಪರಿಶ್ರಮದಿಂದ ಕಳೆದ 4 ದಶಕಗಳಿಂದ ಸೇವೆ ಸಾಧನೆ ಮಾಡುತ್ತಿದ್ದ “ದಾವಣ ಗೆರೆಯ ಸಾಂಸ್ಕೃತಿಕ ರಾಯಭಾರಿ”, “ದಾವಣಗೆರೆಯ ಯಕ್ಷಗಾನ ರಾಯಭಾರಿ” ಎಂದೇ ಪ್ರಖ್ಯಾತರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ರಾಷ್ಟ್ರ ಮಟ್ಟದ “ಜ್ಞಾನ ವಿಭೂಷಣ” ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ಕಸ್ತೂರಿ ಸಿರಿಗನ್ನಡ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರೊ|| ಎಲ್.ಹೆಚ್. ಪೆಂಡಾರಿ ತಿಳಿಸಿದ್ದಾರೆ. ಕಲಾಕುಂಚ, ಯಕ್ಷರಂಗ, ಸಿನಿಮಾ ಸಿರಿ, ಶ್ರೀ ಗಾಯಿತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಗೌಡಸಾರಸ್ವತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.