Sunday, January 19, 2025
Homeಉಡುಪಿಕಟಪಾಡಿ: ಜ. 4, 5ರಂದು ಶ್ರೀ ಕ್ಷೇತ್ರ ಪೇಟೆಬೆಟ್ಟು ನೇಮೋತ್ಸವ

ಕಟಪಾಡಿ: ಜ. 4, 5ರಂದು ಶ್ರೀ ಕ್ಷೇತ್ರ ಪೇಟೆಬೆಟ್ಟು ನೇಮೋತ್ಸವ

ಕಟಪಾಡಿ: ಪೇಟಬೆಟ್ಟು ಕಟಪಾಡಿ ಭಗವಾನ್‌ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಜ. 4 ಮತ್ತು ಜ. 5ರಂದು ಶ್ರೀ ಕ್ಷೇತ್ರ ಪೇಟೆಬೆಟ್ಟು ನೇಮೋತ್ಸವ ಜರುಗಲಿದೆ.

ಜ. 4ರಂದು 7.30ಕ್ಕೆ ಧ್ವಜಸ್ತಂಭ ಮುಹೂರ್ತ, ಅಪರಾಹ್ನ 12 ಗಂಟೆಗೆ ಚಪ್ಪರ ಮೂಹೂರ್ತ, ಅಪರಾಹ್ನ 12.45ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರ ಶುದ್ಧಿ ಪೂಜೆ, 6 ಗಂಟೆಗೆ ಭಂಡಾರ ಹೊರಡುವುದು, ರಾತ್ರಿ 10 ಗಂಟೆಗೆ ಭಗವಾನ್‌ ಶ್ರೀ ಬಬ್ಬುಸ್ವಾಮಿ ನೇಮೋತ್ಸವ ಹಾಗೂ ರಾತ್ರಿ 1 ಗಂಟೆಗೆ ಆದಿಶಕ್ತಿ ಶ್ರೀ ತನ್ನಿಮಾನಿಗ ದೇವಿಯ ನೇಮೋತ್ಸವ ಜರುಗಲಿದೆ.

ಜ. 5ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮೋತ್ಸವ, ಅಪರಾಹ್ನ 3 ಗಂಟೆಗೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular