ಕಟೀಲು : ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್ ನ ಹಾಗೂ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಆಶ್ರಯದಲ್ಲಿ ಕಟೀಲು ದಿ.ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ಭಾನುವಾರದಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದೇರಳಕಟ್ಟೆ ನಿಟ್ಟೆ ವಿ ವಿ ಯ ಕುಲಪತಿ ಡಾ.ಬಿ ಸತೀಶ್ ಕುಮಾರ್ ಭಂಡಾರಿ ವಹಿಸಿದ್ದರು.

ಅದಮಾರು ಮಠದ ದಿವಾನ ಲಕ್ಷ್ಮೀ ನಾಯರಾಯಣ ಮುಚ್ಚಿಂತಾಯ ಸಂಸ್ಮರಣಾ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಕದ್ರಿ ಆಸ್ರಣ್ಣ ಅಭಿಮಾನಿ ಬಳಗ ವತಿಯಿಂದ ನೀಡಲ್ಪಡುವ ದಿ.ಗೋಪಾಲಕೃಷ್ಣ ಪ್ರಶಸ್ತಿಯನ್ನು ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರಿಗೆ ನೀಡಿ ಗೌರವಿಸಲಾಯಿತು
ಅರ್ಚಕ ಪ್ರಶಸ್ತಿಯನ್ನು ಉಡುಪಿ ಪಾಜಕ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಮಾಧವ ಉಪಾಧ್ಯಾಯರಿಗೆ ಹಾಗೂ ಮೊಕ್ತೇಸರ ಪ್ರಶಸ್ತಿಯನ್ನು ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಎಸ್ ಸಚ್ಚಿದಾನಂದ ಛಾತ್ರರಿಗೆ ನೀಡಿ ಸನ್ಮಾನಿಸಲಾಯಿತು.


ಶೋಭಿತ ಭಟ್, ಸ್ವಾತಿ, ಧನ್ಯ ಶ್ರೀ , ರವರಿಗೆ ಪ್ರತಿಭಾ ಪುರಸ್ಕಾರ ಕಟೀಲು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುಸುಮಾವತಿ, ಉರಗತಜ್ಞ ಯತೀಶ್ ಶೆಟ್ಟಿ, ರವರನ್ನು ಅಭಿನಂದಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಧರ್ಮದರ್ಶಿ ಹರಿಕೃಷ್ಣ ಪುನರು ರವರನ್ನು ಪತ್ನಿ, ಉಷಾ ರವರ ಜೊತೆ ಗೌರವಿಸಲಾಯಿತು.


ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶರವು ರಾಘವೇಂದ್ರ ಶಾಸ್ತ್ರಿಯವರು ಶುಭಾ ಶಂಸನೆಗೈದರು.

ಕಸಾಪದ ಮಾಜೀ ರಾಜ್ಯಾಧ್ಯಕ್ಷ ಡಾ.ಧರ್ಮದರ್ಶಿ ಹರಿಕೃಷ್ಣ ಪುನರೂರು,ಉದ್ಯಮಿಗಳಾದ ನಾರಾಯಣ ಪಿ ಎಂ,ಸುರೇಶ್ ಭಂಡಾರಿ,ಶ್ರೀಪತಿ ಭಟ್ ಮೂಡುಬಿದಿರೆ,ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಶೆಟ್ಟಿಗಾರ್,ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ,ಕಿನ್ನಿಗೋಳಿಯ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮೋಹನ್ ಮೆಂಡನ್, ಉದ್ಯಮಿ ಹರೀಶ್ ಶೆಟ್ಟಿ, ಸುಧಾಕರ್ ರಾವ್ ಪೇಜಾವರ, ಅಶ್ವಥ್ ರಾವ್, ಪು. ಗುರುಪ್ರಸಾದ್ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಮುಖ್ಯ ಆತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿ.ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ನ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ರಶ್ಮಿ ರವಿತೇಜ ನಿರೂಪಿಸಿದರು