ಕಾವೂರು: ದನ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಇಬ್ಬರು ಕುಖ್ಯಾತ ದನಗಳ್ಳರನ್ನು ಕಾವೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರು ನಿವಾಸಿಗಳಾದ ಪೈಜಲ್ ಪೈಜಲ್ ಕೊಂಚಾರ್, ಸುಹೈಬ್ ಅಕ್ತರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ರಿಟ್ಜ್ ಕಾರು ಹಾಗೂ ಒಂದು ಸ್ಕೂಟರ್ ನ್ನು ವಶಕ್ಕೆ ಪಡೆಯಲಾಗಿದ್ದು. .ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಪೈಜಲ್ ಪೈಜಲ್ ಕೊಂಚಾರ್ ಬಜ್ಜೆ ಠಾಣೆಯಲ್ಲಿ 01. ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿಯು 02 ಪ್ರಕರಣಗಳಲ್ಲಿ ಸಹ ದನ ಕಳ್ಳತನದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ. ಈ ಹಿಂದೆ ಪೈಜಲ್ ಪೈಜಲ್ ಕೊಂಚಾರ್ ಎಂಬುವನ ಮೇಲೆ ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜೆ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು. ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 01 ಪ್ರಕರಣಗಳು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ದಾಖಲಾಗಿದೆ.