Thursday, April 24, 2025
HomeUncategorizedಕವಿತ ಎಸ್ ಇವರಿಗೆ ಕಾವ್ಯಶ್ರೀ ಪ್ರಶಸ್ತಿ

ಕವಿತ ಎಸ್ ಇವರಿಗೆ ಕಾವ್ಯಶ್ರೀ ಪ್ರಶಸ್ತಿ


ಮಣಿಪಾಲ:ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ವತಿಯಿಂದ “ಕನ್ನಡ ನುಡಿ
ವೈಭವ 2025″ ರ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವರ ಎರಡು ಕವನಗಳು ಕಾವ್ಯ ಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ಅನೇಕ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುತ್ತಾರೆ. ಇವರ ಅನೇಕ ಲೇಖನಗಳು , ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು.’ ಭಾವ ಲಹರಿ ‘ ಎಂಬ ಕವನ ಸಂಕಲನವನ್ನು ಹೊರ ತಂದಿದ್ದಾರೆ. ಇವರು ಮಣಿಪಾಲದ ಕಸ್ತೂರ್ಭ ಆಸ್ಪತ್ರೆಯಲ್ಲಿ ಪಥ್ಯಾಹಾರ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .

RELATED ARTICLES
- Advertisment -
Google search engine

Most Popular