Saturday, July 20, 2024
Homeರಾಜ್ಯಕಾಯಕ ದಿನಾಚರಣೆ ಹಾಗೂ ಶರಣ ಚಿಂತನಾಗೋಷ್ಠಿ

ಕಾಯಕ ದಿನಾಚರಣೆ ಹಾಗೂ ಶರಣ ಚಿಂತನಾಗೋಷ್ಠಿ

ವಚನ ಸಾಹಿತ್ಯ ೨೧ನೇ ಶತಮಾನಕ್ಕೆ ಸಂಜೀವಿನಿ: ಭರಮಪ್ಪ ಮೈಸೂರು

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಮತ್ತು ಎಸ್. ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾಯಕ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಗಳಲ್ಲಿ ವೈಚಾರಿಕತೆ ಎಂಬ ವಿಷಯ
ಕುರಿತು ಉಪನ್ಯಾಸ ನೀಡಿದ ಶರಣ ಭರ್ಮಪ ಮೈಸೂರ್, ನಿವೃತ್ತ ಶಿಕ್ಷಣ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇವರು 21ನೇ ಶತಮಾನದಲ್ಲಿ 21ನೇ ಶತಮಾನದಲ್ಲಿದ್ದ
ಎಲ್ಲಾ ವರ್ಗ, ಜಾತಿ, ಕೋಮುವಾದ ಮೂಲಭೂತವಾದ ಜನಾಂಗ ದ್ವೇಷ ಮುಂತಾದವುಗಳು ಇನ್ನು ಜೀವಂತವಾಗಿದ್ದು ಅವುಗಳನ್ನು ನಿರ್ಮೂಲನೆ ಮಾಡಲು ಶರಣರ ಆಶಯಗಳೊಂದಿಗೆ ಜನಮಾನಸದಲ್ಲಿ ವಚನ ಸಾಹಿತ್ಯವನ್ನು ಪಸರಿಸ ಬೇಕಾದ ತುರ್ತು ಅಗತ್ಯ ಇದೆ ಎಂದು ಮಾತನಾಡಿದರು. ಶರಣ ಡಾ.ಕೆ ಷಣ್ಮುಖಪ್ಪ ಪ್ರಾಂಶುಪಾಲರು ಎಸ್ ಬಿ ಸಿ ಮಹಿಳಾ ಕಾಲೇಜು ಅಥಣಿ ಸ್ನಾತಕೋತ್ತರ ಕೇಂದ್ರ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಬಸವಾದಿ ಶಿವಶರಣರ ವಚನಗಳು ಎಂದೆಂದಿಗಿಂತ ಇಂದಿನ ಕಲುಷಿತ ಸಮಾಜವನ್ನು ಬದಲಾಯಿಸಲು ಅಗತ್ಯವಾಗಿ ಬೇಕಾಗಿದೆ ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ
ಶರಣ ಕೆ ಬಿ ಪರಮೇಶ್ವರಪ್ಪ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇವರು ಅಧ್ಯಕ್ಷೀಯ ನುಡಿಗಳನ್ನು ಆಡಿದರು. ದತ್ತಿ ದಾನಿಗಳಾದ ಶರಣ ಎಂ.ಟಿ ಜಯದೇವಪ್ಪ ಶರಣ ಸಾಹಿತ್ಯ ಪರಿಷತ್ತಿನ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಕಾಯಕ ದಿನಾಚರಣೆ ಅಂಗವಾಗಿ ಕಾಯಕ ಜೀವಿಗಳಾದ ಶರಣ ಸೈಯದ್ ಕುಮಾರ್ ಡಿಟಿಪಿ ಆಪರೇಟರ್ ದಾವಣಗೆರೆ ಮತ್ತು ಶರಣ ಎಂ ಮಂಜಪ್ಪ ಅಡಿಗೆ ತಯಾರಿಕರು ಮಾಳಗೊಂಡನಹಳ್ಳಿ, ಇವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ವತಿಯಿಂದಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣ ಎನ್.ಎಸ್.ರಾಜು ಉಪಾಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ,ಶರಣೆ ಗಾಯತ್ರಿ ವಸ್ತ್ರದ್ ಅಧ್ಯಕ್ಷರು ಜಿಲ್ಲಾ ಕದಳಿ ಮಹಿಳಾ ವೇದಿಕೆ ದಾವಣಗೆರೆ ಅವರಗೆರೆ ರುದ್ರಮುನಿ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾ ಸಭಾ,ಶರಣಪರಮೇಶ್ವರಪ್ಪ ಎಂ ಸಿರಿಗೆರೆ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ ಶರಣ ಬಳ್ಳಾಪುರ ಮಲ್ಲಿಕಾರ್ಜುನಪ್ಪ ಉಪಾಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ ಮತ್ತು ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಲ್ಲಿ ಶರಣ
ಜಿ.ಎಂ ಕುಮಾರಪ್ಪ ಇವರು ಸರ್ವರನ್ನು ಸ್ವಾಗತಿಸಿದರು. ಶರಣ ಬಿ.ಟಿ. ಪ್ರಕಾಶ್ ಶರಣು ಸಮರ್ಪಣೆ ಮಾಡಿದರು ಶರಣ ಆರ್ . ಸಿದ್ದೇಶ್ವರಪ್ಪಇವರು ಕಾರ್ಯಕ್ರಮದ ನಿರೂಪಣೆ ಮಾಡಿ ಯಶಸ್ವಿಗೋೆಳಿಸಿದರು.

RELATED ARTICLES
- Advertisment -
Google search engine

Most Popular