ಉದ್ಯಾವರ ಕೇದಾರ ಶ್ರೀ ಬ್ರಹೇಶ್ವರ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ಕೇದಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ದೇವಸ್ಥಾನದ ಜೀರ್ಣೋದ್ದಾರ ಪ್ರಕ್ರಿಯೆಯಲ್ಲಿ ಕರಸೇವೆ ಮೂಲಕ ಶ್ರದ್ದಾ ಭಕ್ತಿಯಿಂದ ದೇವಸ್ಥಾನಗಳ ಕೆಲಸವನ್ನು ಮಾಡುತ್ತಿರುವ ಜನರು ಜಿಲ್ಲೆಗೆ ಮಾದರಿ ಎಂದು ಉದ್ಯಮಿ, ಆಳ ಸಮುದ್ರ ಮೀನುಗಾರಿಕೆ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎನ್.ಟಿ.ಅಮೀನ್ ಹೇಳಿದರು.
ಉದ್ಯಾವರ ಕೇದಾರ ಶ್ರೀ ಬ್ರಹ್ಮಶ್ವರ ಶ್ರೀ ಮಹಾ ಲಿಂಗೇಶ್ವರ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ಕೇದಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದರು. ಮಲ್ಪೆಯ ಕಾರ್ತಿಕ್ ಸಮೂಹ ಸಂಸ್ಥೆಗಳ ಮಾಲೀಕ ಹರಿಯಪ್ಪ ಕೋಟ್ಯಾನ್ ಬ್ರಹ್ಮಕಲಶದ ಸ್ಟಿಕ್ಟರ್ ಹಾಗೂ ಬ್ಯಾನರ್‌ಗಳನ್ನು ಬಿಡುಗಡೆಗೊಳಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಸುಧೀಂದ್ರ ಉಪಾಧ್ಯಾಯ ಧಾರ್ಮಿಕ ವಿಧಿ ನೆರವೇರಿಸಿದರು.
ಉದ್ಯಮಿಗಳಾದ ಪ್ರಕಾಶ್ ಟಿ. ಕೋಟ್ಯಾನ್, ಕಿಶೋರ್ ವಿ. ಸಾಲ್ಯಾನ್, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಗುರುಪ್ರಸಾದ್ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ಡಿ.ಸುವರ್ಣ, ವಿಶ್ವನಾಥ ಕೋಟ್ಯಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಸಾಲ್ಯಾನ್, ಸದಸ್ಯ ನಿತಿನ್ ಜೆ.ಸಾಲಿಯಾನ್, ಶಶಿಕಲಾ, ಸರೋಜಾ ಸುಧಾಕಾರ್, ವಾರಿಜಾ ಜಯ ಕುಮಾರ್, ಕುಸುಮ ವಿಶ್ವನಾಥ್, ದಿನೇಶ್ ಕೋಟ್ಯಾನ್ ಉಮನಪಾಡಿ, ಕಿರಣ್ ಕುಮಾರ್, ಸುಬ್ರಹ್ಮಣ್ಯ ಪಡಿತ್ತಾಯ, ರೋಶನ್ ಕುಮಾರ್ ಕೇದಾರ, ಶಿವರಾಮ ಶೆಟ್ಟಿ ಶಿವಾನಂದ ಉಮನಪಾಡಿ, ದಕ್ಷಿತ್ ‘ಸುವರ್ಣ, ಪುರಂದರ ಪೂಜಾರಿ ಕೇದಾರ್, ರವೀಂದ್ರ ಶೆಟ್ಟಿ ಕೇದಾರ್, ರಮೇಶ್ ಶೆಟ್ಟಿ ಕೇದಾರ, ಲವ ಸಾಲಿಯಾನ್, ಸಂತೋಷ ಗಾಣಿಗ, ಮುಂಬಯಿ ಉದ್ಯಮಿ ವಿಠಲ ಕೆ. ಕೋಟ್ಯಾನ್ ಉಪಸ್ಥಿತರಿದ್ದರು.ಜಯಕರ ಗಾಣಿಗ ಸ್ವಾಗತಿಸಿದರು. ಸತೀಶ್ ಕುಮಾರ್ ಏರ್ ವಂದಿಸಿದರು ಪ್ರವೀಣ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.