ಡೆಹ್ರಾಡೂನ್: ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೇತ್ರಿ ದೇಗುಲಗಳು ಶುಕ್ರವಾರದಿಂದ ಭಕ್ತರಿಗಾಗಿ ತೆರೆಯಲಿವೆ.
ಹಿಮಪಾತದಿಂದಾಗಿ ಹಿಮಾಲಯದಲ್ಲಿ ನೆಲೆ ನಿಂತಿರುವ ಈ ದೇಗುಲಗಳನ್ನು ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಬೇಸಿಗೆಯ ಆರಂಭದಲ್ಲಿ ಮತ್ತೆ ತೆರೆಯಲಾಗುತ್ತದೆ.
ಚಾರ್ ಧಾಮದ ಮತ್ತೊಂದು ದೇಗುಲ ಬದರಿನಾಥ ಮೇ 12ರಂದು ತೆರೆಯಲಾಗುತ್ತದೆ. ಕೇದಾರನಾಥ ದೇಗುಲವನ್ನು ಇಪ್ಪತ್ತು ಕ್ವಿಂಟಲ್ ಹೂಗಳಿಂದ ಸಿಂಗರಿಸಲಾಗುತ್ತದೆ ಎಂದು ಬದರಿನಾಥ-ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ತಿಳಿಸಿದ್ದಾರೆ.