ಮಲ್ಪೆ: ಕೆಳಾರ್ಕಳಬೆಟ್ಟು ಶ್ರೀದೇವಿ, ಭೂದೇವಿ ಸಹಿತ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎ. 19ರಿಂದ 25ರವರೆಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಲಿದ್ದು ಈ ಸಂಬಂಧ ರವಿವಾರ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.
ಸುಬ್ರಹ್ಮಣ್ಯ ಸಾಮಗ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸದಾನಂದ ನಾಯ್ಕ್, ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಪಡಿಯಾರ್,ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಸಂತ ನಾಯ್ಕ್, ದಯಾನಂದ ಶೆಟ್ಟಿ ಕೊಜಕುಳಿ, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ರಮೇಶ್ ಸಾಮಗ ಕೆಳಾರ್ಕಳಬೆಟ್ಟು ಕೆ. ಕೃಷ್ಣ ಶೆಟ್ಟಿ ಸುರೇಶ್ ನಾಯಕ್ ಕೆಳಾರ್ಕಳ ಭಾಸ್ಕರ ಸಿ. ಅಂಚನ್, ವಿಠಲ ನಾಯ್ಕ್ ಬಾಳಿಗರಬೆಟ್ಟು, ಸುಧಾಕರ ಪೂಜಾರಿ ನಾಯ್ಕ, ಪ್ರಧಾನ ಕಾರ್ಯದರ್ಶಿ ಹಾಗೂ ಊರ ಭಕ್ತರು ಪಾಲ್ಗೊಂಡಿದ್ದರು.
ಬ್ರಹ್ಮ ಬ್ರಹ್ಮಕಲಶೋತ್ಸವದ ಅಂಗವಾಗಿ ಎ. 19ರಂದು ವೈಭವದ ಹೊರೆಕಾಣಿಕೆ ಮೆರವಣಿಗೆಯು ಆಶೀರ್ವಾದ ಜಂಕ್ಷನ್ ನಿಂದ ದೇವಸ್ಥಾನದವರೆಗೆ ಸಾಗಿಬರಲಿದೆ. ಎ. 20ರಿಂದ 23ರವರೆಗೆ ಪ್ರತಿದಿನ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಸಾಧಕರಿಗೆ ಸಮ್ಮಾನ, ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿರುವುದು. ಎ. 23ರಂದು ವೃಷಭ ಲಗ್ನ ಸುಮುಹುರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದ್ದು • ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿರುವುದು. ಎ. 25ರಂದು ಶ್ರೀಬೊಬ್ಬರ್ಯ ಹಾಗೂ ಕಲ್ಕುಡ ಪರಿವಾರ ದೈವಗಳ ಕೋಲವು ನಡೆಯಲಿರುವುದು. .