Saturday, November 2, 2024
Homeಧಾರ್ಮಿಕಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ: ಚಪ್ಪರ ಮೂಹೂರ್ತ ಸಂಪನ್ನ

ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ: ಚಪ್ಪರ ಮೂಹೂರ್ತ ಸಂಪನ್ನ

ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿ ಇದರ ಬ್ರಹ್ಮಕಲಶೋತ್ಸವದ ಅಂಗವಾಗಿ ಚಪ್ಪರ ಮೂಹೂರ್ತವು ಇಂದು (ಎ.9) ಶ್ರೀ ಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ಭಟ್ ಇವರ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ರಂಜಿತ್ ಶೆಟ್ಟಿ ಪುಂಚಾಡಿ, ಸಂಘಟನಾ ಕಾರ್ಯದರ್ಶಿಗಳಾದ ಮಹೇಶ್ ಕೋಟ್ಯಾನ್, ಲೋಕೇಶ್ ಕೋಟ್ಯಾನ್, ಕ್ಷೇತ್ರದ ಆರ್ಚಕ ಗಣೇಶ್ ಕೇಪ್ಲಾಜೆ, ಸದಸ್ಯರಾದ ಸುಪ್ರೇಶ್, ಸುಲೋಚನಾ, ಚಪ್ಪರ ಸಮಿತಿ ಸಂಚಾಲಕ ಜಯಂತ್ ಕುಂದರ್, ಎಸ್.ಡಿ‌.ಕೆ ಮಿಜಾರು ಸಂಸ್ಥೆಯ ಮಾಲಕರಾದ ಶಿವಪ್ರಸಾದ್ ಶೆಟ್ಟಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸುರೇಶ್ ಕೋಟ್ಯಾನ್, ಜಯಕರಪೂಜಾರಿ, ಆನಂದ ಬಿ.ಕೆ, ಅಮಿತ್ ವರ್ಣಬೆಟ್ಟು, ರೋಹಿತ್ ನೂಜಿ ಪ್ರಕಾಶ್ ಪುನ್ಕೆದಡಿ, ಪ್ರಮೀಳಾ ಜೆ.ಕೆ, ಕುಟ್ಟಿ ಕೇಪ್ಲಾಜೆ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular