ಯಕ್ಷಗಾನ ಸಮಷ್ಟಿಯ ಕಲೆ- ಸುಬ್ರಹ್ಮಣ್ಯ ಭಟ್
ಕಿನ್ನಿಗೋಳಿ : ಯಕ್ಷಗಾನ ನಿಂತ ನೀರಲ್ಲ ಸಮಷ್ಟಿಯ ಕಲೆಯಾಗಿದ್ದು ಕೆರೆಕಾಡು ಮೇಳಗಳ ಮೂಲಕವಾಗಿ ಯಕ್ಷಗಾನ ಮತ್ತಷ್ಟು ಕಲೆ ಬೆಳೆಯು ಕಾರಣವಾಗಿರುವುದು ಶ್ಲಾಘನೀಯ ಎಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಡಿ. 1 ರಂದು ಎಸ್. ಕೋಡಿ ಪದ್ಮಾವತಿ ಲಾನ್ ಸಭಾ ಭವನದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಇದರ ಸಂಯೋಜನೆಯಲ್ಲಿ ಶ್ರೀ ವಿನಾಯಕ ಯಕ್ಷ ಕಲೋತ್ಸವ 2024 ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಯುಗಪುರಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಬೋಳ ರವಿಪೂಜಾರಿ, ಉದ್ಯಮಿ ಶ್ರೀರಾಜ್ ಶೆಟ್ಟಿ, ಎಸ್. ಕೋಡಿ ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ, ಉದ್ಯಮಿ ದಿವಾಕರ ಕರ್ಕೇರ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಮಂಗಳೂರಿನ ಕಿಶೋರ್ ಕುಮಾರ್, ಯುವ ಉದ್ಯಮಿ ಗೋಪಾಲಕೃಷ್ಣ ಪುನರೂರು, ಜೀವನ ಕೌಶಲ್ಯ ತರಬೇತುದಾರರರಾದ ಜ್ಯೋತಿ ಪ್ರಶಾಂತ್ ಉಪಸ್ಥಿರಿದ್ದರು.
ಇದೇ ಸಂದರ್ಭದಲ್ಲಿ ಕಿನ್ನಿಗೋಳಿ ಮೆಸ್ಕಾಂನ ಸುಧಾಕರ ಪೂಜಾರಿ, ಕಾರ್ಕಳದ ಉದ್ಯಮಿ ದೇವದಾಸ್ ಶೆಟ್ಟಿಗಾರ್, ಮೂಡಬಿದ್ರೆ ಕಲಾಪೋಷಕ ನವೀನ್ ಚಂದ್ರ ಕರ್ಕೇರ, ಹಾಗೂ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ ಇವರಿಗೆ ಯಕ್ಷಕಲೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಕಲಾ ಗೌರವ ಪುರಸ್ಕಾರವನ್ನು ಯುವ ಪ್ರತಿಭೆಗಳಾದ ನೀಲೇಶ್ ಆಚಾರ್ಯ, ಶಶಾಂಕ್ ಪೂಜಾರಿ, ತನುಶ್ರೀ ಕೆರೆಕಾಡು, ರಶ್ಮಿಕೆರೆಕಾಡು ಅವರಿಗೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಜಯಂತ ಅಮೀನ್ ಸ್ವಾಗತಸಿದರು. ಅಭಿಜಿತ್ ಪ್ರಸ್ತಾವನೆಗೈದರು. ಲೋಹಿತ್ ಅನ್ವಿತಾ, ರೇಷ್ಮಾ , ಮೂಕಾಂಬಿಕಾ ಸಮ್ಮಾನ ಪತ್ರ ವಾಚಿಸಿದರು. ಅಜಿತ್ ಕೆರೆಕಾಡು ಸಮ್ಮಾನಿತರ ಬಗ್ಗೆ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕೃಷ್ಣ ಪಾರಿಜಾತ, ಶ್ರೀರಾಮ ಕಥಸಾರ, ಲವಕುಶ ಕಾಳಗ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು.