ಬಂಟ್ವಾಳ:ಇಲ್ಲಿನ ಕಲ್ಲಡ್ಕ ವಲಯ ಬಂಟರ ಸಂಘದ ವತಿಯಿಂದ ಭಾನುವಾರ ನಡೆದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿದರು.
ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ಬೊಂಡಾಲ ಅಂತರ ಗುತ್ತು ಇವರು ಕಾರ್ಯಕ್ರಮ ಉದ್ಘಾಟಿಸಿದರು, ಪ್ರಮುಖರಾದ ಕೆ. ಮಹಾಬಲ ಶೆಟ್ಟಿ ಕಕ್ಕೆಮಜಲು, ಶರತ್ ಶೆಟ್ಟಿ ಕಕ್ಕೆಮಜಲು, ಪ್ರತಿಭಾ ರೈ ಶುಭ ಹಾರೈಸಿದರು. ವಲಯ ಸಂಘದ ಅಧ್ಯಕ್ಷ ಕೆ.ಪದ್ಮನಾಭ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿವಿಧ ವಿಭಾಗದಲ್ಲಿ ನಡೆದ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲ್ಲೂಕು ಸಂಘದ ಕಾರ್ಯದಶರ್ಿ ಜಗನ್ನಾಥ ಚೌಟ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಜತೆ ಕಾರ್ಯದಶರ್ಿ ರಂಜನ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗ ಅಧ್ಯಕ್ಷೆ ರಮಾ ಎಸ್. ಭಂಡಾರಿ, ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ, ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಸಂತೋಷ್ ಶೆಟ್ಟಿ ಅರೆಬೆಟ್ಟು, ಸಂದೇಶ್ ಶೆಟ್ಟಿ ಅರೆಬೆಟ್ಟು, ಶಶಿಧರ ಮಾರ್ಲ ಬೊಂಡಾಲ ಮತ್ತಿತರರು ಇದ್ದರು.