Sunday, July 21, 2024
Homeಮೂಡುಬಿದಿರೆಶಿರ್ತಾಡಿ | ಪಡುಕೊಣಾಜೆಯಲ್ಲಿ ನಾಳೆ ಕೆಸರ್ಡ್‌ ಒಂಜಿ ದಿನ; ವಿವಿಧ ಆಟೋಟ ಸ್ಪರ್ಧೆ

ಶಿರ್ತಾಡಿ | ಪಡುಕೊಣಾಜೆಯಲ್ಲಿ ನಾಳೆ ಕೆಸರ್ಡ್‌ ಒಂಜಿ ದಿನ; ವಿವಿಧ ಆಟೋಟ ಸ್ಪರ್ಧೆ

ಮೂಡುಬಿದಿರೆ: ಪಡು-ಮೂಡುಕೊಣಾಜೆದ ಜವನೆರ್‌ನ ಆಶ್ರಯದಲ್ಲಿ ಜು.7ರ ಆದಿತ್ಯವಾರ (ನಾಳೆ) ʻಕೆಸರ್‌ಡ್‌ ಒಂಜಿ ದಿನʼ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಪುರುಷರಿಗೆ ಹಗ್ಗ ಜಗ್ಗಾಟ, ವಾಲಿಬಾಲ್‌, ಮಹಿಳೆಯರಿಗೆ ತ್ರೋಬಾಲ್‌, ಹಗ್ಗ ಜಗ್ಗಾಟ ಕಾರ್ಯಕ್ರಮ ನಡೆಯಲಿದೆ. ಪಡುಕೊಣಾಜೆಯ ದೊಡ್ಡಮನೆ ಬಾಕ್ಯಾರುಗದ್ದೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಮೂಡುಬಿದಿರೆ ಪಂಚರತ್ನ ಇಂಟರ್‌ ನ್ಯಾಶನಲ್‌ನ ತಿಮ್ಮಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿರ್ತಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ.ಇ.ಸೋ.ದೇ. ದರೆಗುಡ್ಡೆಯ ಕಾರ್ಯಾಧ್ಯಕ್ಷ ಸುಕೇಶ್‌ ಶೆಟ್ಟಿ ಎದೆಮೇರು, ಶಿರ್ತಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಗ್ನೇಯ ಡಿಸೋಜ, ಮೂಡುಕೊಣಾಜೆ ದೊಡ್ಡಮನೆಗುತ್ತು ಶಿಶುಪಾಲ ಜೈನ್‌, ದೊಡ್ಡಮನೆ ವಸಂತ ಕುಂದರ್‌, ಆರ್‌.ಆರ್.‌ ಫ್ಯಾಶನ್‌ನ ರಾಜೇಶ್‌ ಕೋಟ್ಯಾನ್‌, ಶಿರ್ತಾಡಿ ಪಂಚಾಯತ್‌ ಸದಸ್ಯರುಗಳಾದ ಸಂತೋಷ್‌ ಅಂಚನ್‌, ಶಶಿಕಲಾ, ಕಡಂಬರ ಮನೆ ಶ್ರೀಧರ ಕಡಂಬ, ಮಾರ್ಪಾಡಿ ದಿಲೀಪ್‌ ಕುಮಾರ್‌ ಶೆಟ್ಟಿ, ಶಿರ್ತಾಡಿಯ ಅಭಿನಂದನ್‌ ಹಾರ್ಡ್‌ವೇರ್‌ ಪ್ರಜ್ವಲ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸನ್ಮಾನ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಕೊಣಾಜೆ ಗ್ರಾಮದ ಕಂಬಳ ಕೋಣಗಳಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆ ಸಂಸದ ಬ್ರಿಜೇಶ್ ಚೌಟ ವಹಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಶಾಸಕ ಅಭಯಚಂದ್ರ ಜೈನ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

RELATED ARTICLES
- Advertisment -
Google search engine

Most Popular