ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ, ಪುತ್ತೂರು ಇದರ ವತಿಯಿಂದ ʻಆಟಿ ತಿಂಗೊಳ್ಡ್ ಕೆಸರ್‌ಡೊಂಜಿ ದಿನʼ ಕಾರ್ಯಕ್ರಮ ಆ. 4ರ ಆದಿತ್ಯವಾರ ನಡೆಯಲಿದೆ. ಪಳ್ಳತ್ತಾರು ಶ್ರೀ ಜುಮಾದಿ ದೈವಸ್ಥಾನದ ಹತ್ತಿರದ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಪುರುಷರಿಗೆ ನಾಲ್ಕು ಜನರ ತಂಡದ ವಾಲಿಬಾಲ್ ಪಂದ್ಯ ನಡೆಯಲಿದ್ದು, ಪ್ರಥಮ ಬಹುಮಾನ 5,001 ರೂ. ಮತ್ತು ಸಹ್ಯಾದ್ರಿ ಟ್ರೋಪಿ ಇರಲಿದೆ. ದ್ವಿತೀಯ ಬಹುಮಾನ 4001 ರೂ. ಮತ್ತು ಸಹ್ಯಾದ್ರಿ ಟ್ರೋಫಿ ಇರಲಿದೆ. ಹಗ್ಗ ಜಗ್ಗಾಟ ಸ್ಪರ್ಧೆಯೂ ಇರಲಿದೆ. ಮಡಕೆ ಹೊಡೆಯುವುದು, ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆ ಎಳೆತ, ಉಪ್ಪು ಮೂಟೆ, ಇನ್ನಿತರ ಆಟೋಟಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸಹ್ಯಾದ್ರಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಹ್ಯಾದ್ರಿ ಫ್ರೆಂಡ್ಸ್ (ರಿ), ಕೈಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.