Wednesday, July 24, 2024
Homeಅಪರಾಧಮತಗಟ್ಟೆಯಲ್ಲಿ ಕೇಸರಿ ಶಾಲು-ಹಿಜಾಬ್ ವಿವಾದ; ಪೊಲೀಸರೊಂದಿಗೆ ಮಾತಿನ ಚಕಮಕಿ

ಮತಗಟ್ಟೆಯಲ್ಲಿ ಕೇಸರಿ ಶಾಲು-ಹಿಜಾಬ್ ವಿವಾದ; ಪೊಲೀಸರೊಂದಿಗೆ ಮಾತಿನ ಚಕಮಕಿ

ಮಾನ್ವಿ: ರಾಯಚೂರಿನ ಮಾನ್ವಿ ತಾಲೂಕಿನ ಮತಗಟ್ಟೆಯೊಂದರಲ್ಲಿ ಕೇಸರಿ ಶಾಲು ಧರಿಸಿ ಮತದಾನ ಮಾಡುವುದಕ್ಕೆ ಸಂಬಂಧಿಸಿ ವಿವಾದ ಸೃಷ್ಟಿಯಾಗಿದೆ. ಮತದಾನ ಕೇಂದ್ರದಲ್ಲಿ ಕೇಸರಿ ಶಾಲು ಧರಿಸಿದ ಯುವಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಾಹ್ಮಣವಾಡಿ ಬೂತ್ ಸಂಖ್ಯೆ 185ರಲ್ಲಿ ಈ ಘಟನೆ ನಡೆದಿದೆ. ಕೆಲವು ಯುವಕರು ಕೇಸರಿ ಶಾಲು ಧರಿಸಿ ಮತದಾನಕ್ಕೆ ಬಂದಿದ್ದಾರೆ. ಈ ವೇಳೆ ಪೊಲೀಸರು ತಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಬಳಿಕ ಆರ್ ಓ ಚುನಾವಣಾಧಿಕಾರಿ, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕೇಸರಿ ಶಾಲು ಧರಿಸಿ ಮತದಾನ ನಡೆಸಬಹುದು ಎಂದು ತಿಳಿಸಿದ್ದಾರೆ.

ಕೇಸರಿ ಶಾಲಿನಲ್ಲಿ ಯಾವುದೇ ಚಿಹ್ನೆ ಇದ್ದರೆ ಮತದಾನಕ್ಕೆ ಅವಕಾಶವಿಲ್ಲ ಎಂದು ಆರ್ ಓ ತಿಳಿಸಿದರು. ಬಳಿಕ ಬುರ್ಖಾ, ಮುಖ ಮುಚ್ಚಿಕೊಂಡು ಬಂದ ಮಹಿಳೆಯರು ಮತಗಟ್ಟೆಯ ಅಧಿಕಾರಿಗಳಿಗೆ ಮುಖ ತೋರಿಸಿ ಮತ ಚಲಾಯಿಸಬೇಕು ಎಂದು ಕೇಸರಿ ಶಾಲು ಧರಿಸಿದ ಯುವಕರು ಪಟ್ಟು ಹಿಡಿದ ಘಟನೆ ನಡೆದಿದೆ.  

RELATED ARTICLES
- Advertisment -
Google search engine

Most Popular