ಬಂಟ್ವಾಳ ತಾಲ್ಲೂಕಿನ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡು ಸಭಾಂಗಣ ಬಳಿ ಗದ್ದೆಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್ತ್’ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾರಮಾನಿ ಕಾನದ ಕಟದೈವ ಪಾತ್ರಿಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಸಂತೋಷ್ ಭಂಡಾರಿಬೆಟ್ಟು, ಪ್ರಮುಖರಾದ ಅಜಯ್ ಕೊಂಬ್ರಬೈಲು, ಕೆ.ಮಾಯಿಲಪ್ಪ ಸಾಲ್ಯಾನ್, ಎ.ಗೋವಿಂದ ಪ್ರಭು, ಸದಾಶಿವ ಬಂಗೇರ, ಶಿವಾನಂದ ಬಳ್ಳಾಲ್ ಬಾಗ್, ಶ್ರೀನಿವಾಸ ಅಬರ್ಿಗುಡ್ಡೆ, ಜನಾರ್ದನ ಚೆಂಡ್ತಿಮಾರ್, ರಾಜಾ ಚೆಂಡ್ತಿಮಾರ್, ಸೇಸಪ್ಪ ಬೆದ್ರಕಾಡು ಮತ್ತಿತರರು ಇದ್ದರು.