ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನ್ನಡ ತುಳು ಹಾಡುಗಳಿಗೆ ಸಾಹಿತ್ಯ ಬರೆದು ಹಾಗೂ ಆಲ್ಬಮ್ ಹಾಡುಗಳಿಗೆ ಪ್ರಖ್ಯಾತಿ ಪಡೆದ ಕೇಶವ ನೆಲ್ಯಾಡಿ ಅವರಿಗೆ ಪ್ರಶಸ್ತಿಗಳು ಲಭಿಸಿವೆ. ತುಳು ನಾಟಕ ತುಳು ಕವನ ಕನ್ನಡ ಕವನ, ಕಥೆ, ಸಮಾಜ ಸೇವೆ, ಶೌರ್ಯ ವಿಪತ್ತು ತಂಡದಲ್ಲಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಇವರ ಹೆಸರು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿರುತ್ತದೆ. ಇದೀಗ ಇವರ ಸೇವೆಯನ್ನು ಗುರುತಿಸಿ ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ)ಬೆಂಗಳೂರು ಆಯೋಜಿಸಿರುವ ವಂದೇ ಮಾತರಂ ಕಾರ್ಯಕ್ರಮದಲ್ಲಿ “ಕಾವ್ಯ ಚೇತನ”ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಈ ಪ್ರಶಸ್ತಿ ಪ್ರದಾನವು ಆಗಸ್ಟ್ 18ರ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನ ಕುವೆಂಪು ಸಭಾoಗಣದಲ್ಲಿ ನಡೆಯಲಿದೆ.