Saturday, June 14, 2025
HomeUncategorizedಪೆಟ್ರೋಲ್‌ ಟ್ಯಾಂಕರ್‌ನಲ್ಲಿ ಗೋವು ಕಳ್ಳಸಾಗಣೆ ಮಾಡುವಾಗ ರೆಡ್‌ಹ್ಯಾಂಡ್ ಸಿಕ್ಕಿ ಬಿದ್ದ ಖದೀಮ ಕಳ್ಳರು

ಪೆಟ್ರೋಲ್‌ ಟ್ಯಾಂಕರ್‌ನಲ್ಲಿ ಗೋವು ಕಳ್ಳಸಾಗಣೆ ಮಾಡುವಾಗ ರೆಡ್‌ಹ್ಯಾಂಡ್ ಸಿಕ್ಕಿ ಬಿದ್ದ ಖದೀಮ ಕಳ್ಳರು

ಅಕ್ರಮ ಗೋ ಸಾಗಾಟವು ಅಪರಾಧವಾಗಿದೆ. ಹೀಗಿದ್ದರೂ ಕೂಡಾ ಪೊಲೀಸರ ಕಣ್ಣಿಗೆ ಮಣ್ಣೆರಚಿ ಖತರ್ನಾಕ್‌ ಪ್ಲಾನ್‌ಗಳನ್ನು ಮಾಡಿ ಗೋವು ಕಳ್ಳಸಾಗಣೆ ಮಾಡುವವರಿದ್ದಾರೆ. ಇದೇ ರೀತಿ ಇಲ್ಲೊಂದು ಕಡೆ ಖದೀಮ ಕಳ್ಳರು ಎಲ್ಲರ ಕಣ್ಣಿಗೆ ಮಣ್ಣೆರಚಿ ಪೆಟ್ರೋಲ್‌ ಟ್ಯಾಂಕರ್‌ನ ಕಂಟೇನರ್‌ನಲ್ಲಿ ರಾಶಿ ರಾಶಿ ಗೋವುಗಳನ್ನು ತುಂಬಿಸಿ ಅಕ್ರಮವಾಗಿ ಗೋವು ಕಳ್ಳ ಸಾಗಾಣಿಕೆ ಮಾಡಲು ಹೋಗಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಪೆಟ್ರೋಲ್‌ ಬದಲು ಕಂಟೇನರ್‌ನಲ್ಲಿ ಗೋವುಗಳನ್ನು ಸಾಗಾಟ ಮಾಡಲು ಯತ್ನಿಸಿದ ಖದೀಮರ ಖತರ್ನಾಕ್‌ ಪ್ಲಾನ್‌ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಪೆಟ್ರೋಲ್‌ ಸಾಗಿಸುವ ನೆಪದಲ್ಲಿ ಟ್ಯಾಂಕರ್‌ ಕಂಟೇನರ್‌ನಲ್ಲಿ ಗೋ ಸಾಗಾಟ ಮಾಡಲು ಯತ್ನಿಸಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ನೋಂದಾಯಿಸಲಾದ JK03 E 5451 ನಂಬರ್‌ ಪ್ಲೇಟ್‌ನ ಪೆಟ್ರೋಲ್‌ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ಮಾಹಿತಿ ಸಿಕ್ಕ ಜನರು ಟ್ಯಾಂಕರ್‌ನನ್ನು ತಡೆದು ಜುಲ್ಡೋಜರ್‌ ಮೂಲಕ ಕಂಟೇನರ್‌ ಅನ್ನು ಕೆಡವಿದ್ದಾರೆ. ಹೀಗೆ ಕಂಟೇನರ್‌ ಅನ್ನು ತೆರೆದು ನೋಡಿದಾಗ ಅದರೊಳಗಿದ್ದ ರಾಶಿ ರಾಶಿ ಹಸುಗಳನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಜನ ಆಗ್ರಹಿಸಿದ್ದಾರೆ.

ಈ ಕುರಿತ ಪೋಸ್ಟ್‌ ಒಂದನ್ನು KreatelyMedia ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಟ್ಯಾಂಕರ್‌ ಒಳಗೆ ಯಾವುದೇ ಪೆಟ್ರೋಲ್”‌ ಇಲ್ಲ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪೆಟ್ರೋಲ್‌ ಟ್ಯಾಂಕರ್‌ ಕಂಟೇನರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಜನ ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಜನರೆಲ್ಲರೂ ಸೇರಿ ಜುಲ್ಡೋಜರ್‌ ಸಹಾಯದಿಂದ ಟ್ಯಾಂಕರ್‌ ಕಂಟೇನರ್‌ ಓಪನ್‌ ಮಾಡಿಸಿದ್ದಾರೆ. ಆ ಸಂದರ್ಭದಲ್ಲಿ ಅದರೊಳಗೆ ಗೋವುಗಳಿರುವುದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ನವೆಂಬರ್‌ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗ್ಲೇಬೇಕುʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ಕಂಡು ಶಾಕ್‌ ಆಯ್ತುʼ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular