ಕಿನ್ನಿಗೋಳಿ: ಖಿಲ್‌ರಿಯಾ ಜುಮಾ ಮಸೀದಿ ಶಾಂತಿನಗರ ಇದರ ಆಡಳಿತ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎ. ಹನೀಫ್ ಇವರನ್ನು ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ಸಂಸ್ಥೆಯ ಕಚೇರಿ ವಠಾರದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭ ಶ್ರೀಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಇದರ ಧರ್ಮದರ್ಶಿ ವಿವೇಕಾನಂದ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಟಿ.ಎಚ್. ಮಯ್ಯದ್ದಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾದರ್, ಅಡ್ವಕೇಟ್ ಹೈದರ್ ಅಲಿ, ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಗೌರವಾಧ್ಯಕ್ಷ ಟಿ.ಕೆ. ಅಬ್ದುಲ್ ಖಾದರ್, ಅಧ್ಯಕ್ಷ ಗುಲಾಂ ಹುಸೇನ್, ನೂರುಲ್ ಹುದಾ ಅಸೋಸಿಯೇಶನ್ ಅಧ್ಯಕ್ಷ ನೂರುದ್ದೀನ್, ಸದಸ್ಯರಾದ ಶಫೀಕ್, ಶಾಕೀರ್, ಸೈಫುದ್ದೀನ್, ಇರ್ಷಾದ್, ಅನೀಝ್, ಇಮ್ರಾನ್, ನಿಝಾರ್, ಹಾಫಿಲ್ ಉಪಸ್ಥಿತರಿದ್ದರು.
ಖಿಲ್‌ರಿಯಾ ಜುಮಾ ಮಸೀದಿ ಶಾಂತಿನಗರ ಇದರ ಆಡಳಿತ ಸಮಿತಿಗೆ ನೂತನ ಅಧ್ಯಕ್ಷರಾಗಿ ಟಿ.ಎ. ಹನೀಫ್ ಆಯ್ಕೆ
RELATED ARTICLES