Tuesday, March 18, 2025
Homeಅಪರಾಧಕಿಡ್ನಿ ಮಾರಾಟ: ₹6 ಲಕ್ಷ ವಂಚಿಸಿದ ಸೈಬರ್‌ ಕಳ್ಳರು

ಕಿಡ್ನಿ ಮಾರಾಟ: ₹6 ಲಕ್ಷ ವಂಚಿಸಿದ ಸೈಬರ್‌ ಕಳ್ಳರು

ಬೆಂಗಳೂರು: ಹಣದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಕಿಡ್ನಿ ಮಾರಾಟ ಮಾಡಲು ಹೋಗಿ ಸೈಬರ್ ಕಳ್ಳರ ಬಲೆಗೆ ಬಿದ್ದು, ₹6 ಲಕ್ಷ ಕಳೆದುಕೊಂಡಿದ್ದಾರೆ.

ಶ್ರೀನಿವಾಸ್‌ ಹಣ ಕಳೆದುಕೊಂಡ ವ್ಯಕ್ತಿ. ಶ್ರೀನಿವಾಸ್‌ ಅವರು ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದು, ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶ್ರೀನಿವಾಸ್‌ ಅವರು ಬ್ಯಾಂಕ್‌ ಸೇರಿದಂತೆ ಕೆಲವರ ಬಳಿ ಸಾಲ ಪಡೆದುಕೊಂಡಿದ್ದರು. ಆರ್ಥಿಕ ಮುಗ್ಗಟ್ಟು ಎದುರಾದ ಕಾರಣಕ್ಕೆ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

‘ವೆಬ್‌ಸೈಟ್‌ವೊಂದರಲ್ಲಿ ಯಾರಿಗಾದರೂ ತುರ್ತು ಕಿಡ್ನಿ ಬೇಕಾದರೆ ಸಂಪರ್ಕಿಸಿ’ ಎಂದು ಶ್ರೀನಿವಾಸ್ ತಮ್ಮ ಮೊಬೈಲ್ ನಂಬರ್ ನಮೂದಿಸಿದ್ದರು. ಇದೇ ವೇಳೆ ಅದರಲ್ಲಿದ್ದ ಲಿಂಕ್‌ವೊಂದನ್ನು ಕ್ಲಿಕ್ ಮಾಡಿದಾಗ ಕಿಡ್ನಿ ಕೊಟ್ಟರೆ ದೊಡ್ಡ ಮೊತ್ತದ ಹಣ ಕೊಡುವುದಾಗಿ ಜಾಹೀರಾತು ಹಾಕಿರುವುದನ್ನು ಗಮನಿಸಿದ್ದರು. ಕೂಡಲೇ ಆ ಮೊಬೈಲ್ ನಂಬರ್ ಪಡೆದು, ವಾಟ್ಸ್‌ಆಪ್‌ ಕರೆ ಮಾಡಿ ಮಾತನಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ, ಈ ಪ್ರಕ್ರಿಯೆಗೆ ಹಣ ನೀಡಬೇಕಾಗುತ್ತದೆ ಎಂದು ನಂಬಿಸಿದ್ದ. ಶ್ರೀನಿವಾಸ್‌ ಮತ್ತೆ ಸಾಲ ಮಾಡಿಕೊಂಡು ಆತ ಹೇಳಿದಂತೆಯೇ ಹಂತಹಂತವಾಗಿ ₹6 ಲಕ್ಷವನ್ನು ಆನ್‌ಲೈನ್‌ ಮೂಲಕ ಸಂದಾಯ ಮಾಡಿದ್ದರು. ಅದಾದ ಮೇಲೆ ಸೈಬರ್ ವಂಚಕರು ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.

RELATED ARTICLES
- Advertisment -
Google search engine

Most Popular