ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟಿಗ ಕೊಹ್ಲಿ ಯಾರಿಗೆ ಇಷ್ಟವಿಲ್ಲ ಹೇಳಿ… ಕೊಹ್ಲಿಯನ್ನೇ ಐಕಾನ್ ಆಗಿ ತೆಗೆದುಕೊಳ್ಳುವ ಕೋಟ್ಯಾಂತರ ಕ್ರಿಕೆಟ್ ಪ್ರಿಯರು ಭಾರತದಲ್ಲಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕಿವಿಯಲ್ಲಿ ಕಿವಿಯಲ್ಲಿ ಬೆಳ್ಳಿ ರಿಂಗ್ ಹಾಕಿಕೊಂಡಿರುವುದು ಈಗ ಅಭಿಮಾನಿಗಳ ಗಮನ ಸೆಳೆದಿದೆ. ಆದರೆ ಕೊಹ್ಲಿ ಮಾತ್ರ ಫ್ಯಾಶನ್‌ಗಾಗಿ ಈ ಕಿವಿಯೋಲೆ ಧರಿಸುತ್ತಿಲ್ಲ. ಅದರ ಹಿಂದೆ ಬಲವಾದ ನಂಬಿಕೆಯಿದೆ. ಆ ನಂಬಿಕೆ ಏನೆಂದು ಗೊತ್ತಾದರೇ ನೀವೂ ಅಚ್ಚರಿಗೊಳ್ಳುವಿರಿ.
ಮೊದಲೆಲ್ಲಾ ನಾನು ಪೂಜೆ-ಪುನಸ್ಕಾರ ಮಾಡುವವರಂತೆ ಕಾಣುತ್ತೇನಾ? ಎನ್ನುತ್ತಿದ್ದ ಕೊಹ್ಲಿ ಕಳೆದ ಮೂರು ವರ್ಷಗಳಲ್ಲಿ ಕಂಡ ಕೆಲವು ವೈಫಲ್ಯಗಳ ಬಳಿಕ ಬದಲಾಗಿದ್ದಾರೆ. ಈಗ ಮಾತು ಮಾತಿಗೆ ದೇವರ ಭಜನೆ ಮಾಡುತ್ತಿದ್ದಾರೆ. ಹಲವು ನಂಬಿಕೆಗಳನ್ನೂ ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾಣಿಸಿಕೊಂಡಿರುವ ಕಿವಿಯಲ್ಲಿನ ರಿಂಗ್ ಕೂಡ ಆ ನಂಬಿಕೆಯ ಭಾಗವಾಗಿದೆ.
ಕಳೆದ ವರ್ಷದ ವೆಸ್ಟ್ ಇಂಡಿಸ್ ಪ್ರವಾಸದಿಂದ ವಿರಾಟ್ ಕೊಹ್ಲಿ ಕಿವಿಯಲ್ಲಿ ಸಿಲ್ವರ್ ರಿಂಗ್ ಕಾಣಿಸುತ್ತಿದೆ. ಇದರ ಹಿಂದಿನ ಕಾರಣ ಫ್ಯಾಶನ್ ಅಲ್ಲವೇ ಅಲ್ಲ. ಸಿಲ್ವರ್ ರಿಂಗ್ ಎನರ್ಜಿ ಬೂಸ್ಟರ್ ಎನ್ನುವ ಬಲವಾದ ನಂಬಿಕೆಯೊಂದಿಗೆ ಕೊಹ್ಲಿ ಅದನ್ನು ಧರಿಸುತ್ತಿದ್ದಾರೆ ಎನ್ನಲಾಗಿದೆ.
ಕಿಂಗ್ ಕೊಹ್ಲಿ ಕಿವಿಯಲ್ಲಿ ಸಿಲ್ವರ್ ರಿಂಗ್! | ವಿರಾಟ್ ಕಿವಿಯೋಲೆ ಮಹತ್ವ ಗೊತ್ತಾ? ಗೊತ್ತಾದರೆ ನೀವು ಅಚ್ಚರಿಪಡುತ್ತೀರಿ!
RELATED ARTICLES