ಮುಲ್ಕಿ: ಕಿನ್ನಿಗೋಳಿ ಸಮೀಪದ ಮೆನ್ನ ಬೆಟ್ಟು ಗ್ರಾಮದ ಉಲ್ಲಂಜೆ ಬಳಿಯ ಯಮುನಾ ಪೂಜಾರ್ತಿ ಎಂಬವರ ಮನೆಯ ವಠಾರದಲ್ಲಿ ಮನೆಗೆ ತಗಡು ಶೀಟು ಅಳವಡಿಸುವ ಕೆಲಸ ಮಾಡುತ್ತಿರುವಾಗ ರಸ್ತೆ ಪಕ್ಕದ ವಿದ್ಯುತ್ ಕಂಬದ ವಿದ್ಯುತ್ ತಂತಿಗೆ ಯುವಕನ ಕೈಯಲ್ಲಿದ್ದ ಪೈಪ್ ತಗಲಿ ವಿದ್ಯುತ್ ಪ್ರವಹಿಸಿ ಯುವಕ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿದ್ದಾನೆ ಮೃತ ಯುವಕನನ್ನು ಹಳೆಯಂಗಡಿ ಸಮೀಪದ ಇಂದಿರಾ ನಗರ ಲೈಟ್ ಹೌಸ್ ನಿವಾಸಿ ಅವಿನಾಶ್ ರತ್ನಾಕರ ಹೆಗ್ಡೆ (32) ಎಂದು ಗುರುತಿಸಲಾಗಿದೆ.
ಮೃತ ಅವಿನಾಶ್ ರತ್ನಾಕರ ಹೆಗ್ಡೆ ಎಂಬಾತನು ನಿತಿನ್ ಮತ್ತು ರಕ್ಷಿತ್ ಎಂಬವರ ಜೊತೆ ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬಳಿಯ ಯಮುನಾ ಪೂಜಾರ್ತಿ ಎಂಬವರ ಮನೆಯ ವಠಾರದಲ್ಲಿ ಮನೆಗೆ ತಗಡು ಶೀಟು ಅಳವಡಿಸುವ ಕೆಲಸ ಮಾಡುತ್ತಿರುವಾಗ ಅವಿನಾಶ್ ರತ್ನಾಕರ್ ಹೆಗ್ಡೆ ರವರು 20 ಅಡಿಯ ಪೈಪನ್ನು ಮೇಲಕ್ಕೆತ್ತಿದಾಗ ಬದಿಯಲ್ಲಿದ್ದ ರಸ್ತೆ ಪಕ್ಕದ ವಿದ್ಯುತ್ ಕಂಬದ ವಿದ್ಯುತ್ ತಂತಿಗೆ ಅವಿನಾಶ್ ಕೈಯಲ್ಲಿದ್ದ ಪೈಪ್ ತಗಲಿ ವಿದ್ಯುತ್ ಪ್ರವಹಿಸಿ ಅವಿನಾಶ್ ಕುಸಿದು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಕೂಡಲೇ ನಿತಿನ್ ಮತ್ತು ರಕ್ಷಿತ್ ಮತ್ತಿತರರು ಸೇರಿ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಯುವಕ ಅವಿವಾಹಿತನಾಗಿದ್ದು ತಂದೆ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದು ಬಡ ಕುಟುಂಬದ ರೋಧನ ಮುಗಿಲು ಮುಟ್ಟಿದೆ ದಯಾನಂದ ನೀಡಿರುವ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.