ಕಿನ್ನಿಗೋಳಿ: ಯುಗಪುರುಷ ನೇತೃತ್ವದಲ್ಲಿ ವಾಯ್ಸ್ ಆಫ್ ಆರಾಧನ ಇದರ ಸಹಯೋಗದೊಂದಿಗೆ ಡಿ. 29ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಬೆಳಗ್ಗೆ 9.30ರಿಂದ ರಾಜ್ಯಮಟ್ಟದ ಮಕ್ಕಳ ಹಬ್ಬ ನಡೆಯಲಿದೆ.
ಅಂದು ಬೆಳಗ್ಗೆ 11ರಿಂದ ಮಕ್ಕಳ ಕವಿಗೋಷ್ಠಿ, ಮಧ್ಯಾಹ್ನ 12ರಿಂದ ನೃತ್ಯ, ಹಾಡು, ಸಂಗೀತ, ನಾಟಕ, ಕಥಾ ಪಠಣ ನಡೆಯಲಿದೆ. ಅಲ್ಲದೆ ಅಂದು ನಡೆಯುವ ಅಮ್ಮೇಳನದ ಅಧ್ಯಕ್ಷತೆಯನ್ನು ಶ್ರೇಯಾ ಎಂ.ಜಿ.ಸುಳ್ಯ ವಹಿಸಲಿದ್ದು, ಉದ್ಘಾಟನೆಯನ್ನು ಕೇಶವ್ ಭಟ್ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಶುಭಾಶಂಸನೆ, ಯುಗಪುರುಷ ಕಿನ್ನಗೋಳಿಯ ಪ್ರಧನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ ಶುಭನುಡಿಗೈಯ್ಯಲಿದ್ದು, ಮುಖ್ಯ ಅಥಿತಿಗಳಾಗಿ ಸುರತ್ಕಲ್ ಅಗರಿ ಎಂಟರ್‌ಪ್ರೈಸಸ್ ಮಾಲಕರಾದ ಅಗರಿ ರಾಘವೇಂದ್ರ ರಾವ್, ಶ್ರೀ ದುರಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನ ಉಲೇಪಾಡಿಯ ಧರ್ಮದರ್ಶಿ ಮೋಹನ್‌ದಾಸ ಸುರತ್ಕಲ್, ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಪುರಂದರ ಶೆಟ್ಟಿಗಾರ್, ಕಿನ್ನಗೋಳಿ ತನು ಇಲೆಕ್ಟ್ರಿಕಲ್ಸ್ ಮಾಲಕರಾದ ಅಜಿತ್ ಕೇರೆಕಾಡು ಹಾಗೂ ಮೂಡುಬಿದಿರೆ ತಾಲೂಕು ಜಾನಪದ ಅಕಾಡೆಮಿಯ ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಿನ್ನಿಗೋಳಿ: ಡಿ. 29ರಂದು ರಾಜ್ಯಮಟ್ಟದ ಮಕ್ಕಳ ಹಬ್ಬ
RELATED ARTICLES